Sunday, April 19, 2026
Flats for sale
Homeಜಿಲ್ಲೆಮಂಗಳೂರು ; ನವಮಂಗಳೂರಿಗೆ ಆಗಮಿಸಿದ ಐಷಾರಾಮಿ 'ಸೆವೆನ್ ಸೀಸ್ ಮರಿನರ್ ಕ್ರೂಸ್ ಹಡಗು.

ಮಂಗಳೂರು ; ನವಮಂಗಳೂರಿಗೆ ಆಗಮಿಸಿದ ಐಷಾರಾಮಿ ‘ಸೆವೆನ್ ಸೀಸ್ ಮರಿನರ್ ಕ್ರೂಸ್ ಹಡಗು.

ಮಂಗಳೂರು : ನವ ಮಂಗಳೂರು ಬಂದರು ಪ್ರಾಧಿಕಾರ (NMPA) ಇಂದು ಐಷಾರಾಮಿ ಕ್ರೂಸ್ ಹಡಗು Seven Seas Mariner ಅನ್ನು ಭವ್ಯವಾಗಿ ಸ್ವಾಗತಿಸಿತು. ಈ ಮೂಲಕ ಭಾರತದ ಪಶ್ಚಿಮ ಕರಾವಳಿಯಲ್ಲಿ ಕ್ರೂಸ್ ಪ್ರವಾಸೋದ್ಯಮಕ್ಕೆ ಮತ್ತೊಂದು ಉತ್ತೇಜನ ಸಿಕ್ಕಂತಾಗಿದೆ.

ಬಹಾಮಾಸ್ ಧ್ವಜ ಹೊಂದಿರುವ ಈ ಹಡಗು ಕೊಚ್ಚಿ ಯಿಂದ ಆಗಮಿಸಿ ಬಂದರಿನ 4ನೇ ಬೆರ್ಥ್‌ನಲ್ಲಿ ನಿಲುಗಡೆಗೊಂಡಿತು. ಹಡಗಿನಲ್ಲಿ ಒಟ್ಟು 607 ಪ್ರಯಾಣಿಕರು ಹಾಗೂ 460 ಸಿಬ್ಬಂದಿ ಸದಸ್ಯರು ಇದ್ದರು. ಬಳಿಕ ಹಡಗು ತನ್ನ ಮುಂದಿನ ಗಮ್ಯಸ್ಥಾನವಾದ ಮರ್ಮುಗೋವ್ ಕಡೆಗೆ ಪ್ರಯಾಣ ಮುಂದುವರಿಸಲಿದೆ.

ಹಡಗು ಮತ್ತು ಪ್ರಯಾಣಿಕರ ನಿರ್ವಹಣೆಯನ್ನು ಸುಗಮವಾಗಿ ನಡೆಸಲು NMPA, ಕಸ್ಟಮ್ಸ್, ಇಮಿಗ್ರೇಶನ್, CISF ಸೇರಿದಂತೆ ವಿವಿಧ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿತು. ಬಂದ ಪ್ರವಾಸಿಗರಿಗೆ ಕಾರ್ಕಳ, ಮೂಡಬಿದ್ರಿ, ಪಿಲಿಕುಳ ಹಾಗೂ ಮಂಗಳೂರು ನಗರದ ಪ್ರಮುಖ ಪ್ರವಾಸಿ ತಾಣಗಳಿಗೆ ವಿಶೇಷ ಪ್ರವಾಸ ವ್ಯವಸ್ಥೆ ಮಾಡಲಾಗಿತ್ತು. ಈ ಯಶಸ್ವಿ ಕಾರ್ಯಾಚರಣೆ ನವ ಮಂಗಳೂರು ಬಂದರನ್ನು ಅಂತರಾಷ್ಟ್ರೀಯ ಕ್ರೂಸ್ ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವಲ್ಲಿ ಮತ್ತಷ್ಟು ಬಲ ತುಂಬಿದ್ದು, ಉನ್ನತ ಮಟ್ಟದ ಸೇವೆಗಳನ್ನು ಒದಗಿಸುವಲ್ಲಿ NMPAಯ ಬದ್ಧತೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular