ಅಬುಧಾಬಿ : ಮಧ್ಯಪ್ರಾಚ್ಯ ಯುದ್ಧ ತೀವ್ರಗೊಳ್ಳುತ್ತಿರುವ ನಡುವೇ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಯುಎಇ ಶಾಕ್ ಕೊಟ್ಟಿದೆ. ಈ ಹಿಂದೆ ನೀಡಿದ್ದ 3.5 ಬಿಲಿಯನ್ ಡಾಲರ್ ಸಾಲವನ್ನು ತಕ್ಷಣವೇ ಮರುಪಾವತಿಸುವಂತೆ ಯುಎಇ ಸೂಚಿಸಿದೆ. ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವೆ ಹೆಚ್ಚುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಯುಎಇ ಈ ಹಠಾತ್ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಏ.17 ರವರೆಗೆ ವಿಸ್ತರಿಸಲಾಗಿದ್ದ ಮರು ಪಾವತಿಯ ಗಡುವನ್ನು ಈಗ ತಕ್ಷಣಕ್ಕೆ ಜಾರಿಗೆ ಬರುವಂತೆ ಮರುಪಾವತಿಸಲು ತಿಳಿಸಲಾಗಿದೆ.
ಪಾಕಿಸ್ತಾನವು ಈ ಮೊತ್ತದ ಮೇಲೆ ವಾರ್ಷಿಕ ಶೇ. ೬ರಷ್ಟು ಬಡ್ಡಿಯನ್ನು ಪಾವತಿಸುತ್ತಿತ್ತು. ಪ್ರತಿ ವರ್ಷ ಈ ಸಾಲವನ್ನು ನವೀಕರಿಸುತ್ತಿದ್ದ ಯುಎಇ, ಈ
ಬಾರಿ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಕಾರಣಗಳಿಂದ ಹಣವನ್ನು ವಾಪಸ್ ಕೇಳಿದೆ. ಪಾಕಿಸ್ತಾನದ ಆರ್ಥಿಕತೆಯು ಈಗಾಗಲೇ ಹದಗೆಟ್ಟಿದ್ದು, ವಿದೇಶಿ ವಿನಿಮಯ ಮೀಸಲು ತೀವ್ರ ಕುಸಿತ ಕಂಡಿದೆ. ಪ್ರಸ್ತುತ ಪಾಕಿಸ್ತಾನದ ಬಳಿ 21ಬಿಲಿಯನ್ ಡಾಲರ್ ಮೀಸಲು ಹಣವಿದ್ದರೂ, ಯುಎಇಗೆ ಒಮ್ಮೆಲೇ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸುವುದರಿಂದ ದೇಶದ ಆರ್ಥಿಕ ಸ್ಥಿರತೆಯ ಮೇಲೆ ಭಾರಿ ಪರಿಣಾಮ ಬೀರಲಿದೆ.


