Saturday, April 4, 2026
Flats for sale
HomeUncategorizedಬೆಂಗಳೂರು : ಐಪಿಎಲ್‌ನಲ್ಲೂ ನಕಲಿ ಟಿಕೆಟ್ ಮಾರಾಟ !

ಬೆಂಗಳೂರು : ಐಪಿಎಲ್‌ನಲ್ಲೂ ನಕಲಿ ಟಿಕೆಟ್ ಮಾರಾಟ !

ಬೆಂಗಳೂರು : ಇದೀಗ ಐಪಿಎಲ್ ನಕಲಿ ಟಿಕೆಟ್ ಜಾಲ ಉದ್ಭವವಾಗಿದ್ದು ಇದನ್ನು ತಡೆಗಟ್ಟಿ, ನಕಲಿ ಟಿಕೆಟ್ ಮಾರಾಟ ಮಾಡುವವರ ವಿರುದ್ಧ ಕ್ರಮವಹಿಸಲು ಪೊಲೀಸರು ಮುಂದಾಗಿದ್ದಾರೆ. ಐಪಿಎಲ್ ಕ್ರಿಕೆಟ್ ಹಬ್ಬದ ನಡುವೆಯೇ ಬೆಂಗಳೂರಿನಲ್ಲಿ ನಕಲಿ ಟಿಕೆಟ್ ಜಾಲ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಈ ದಂಧೆಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ಈಗ ಸಂಪೂರ್ಣವಾಗಿ ಆನ್‌ಲೈನ್ ಟಿಕೆಟ್ ವ್ಯವಸ್ಥೆಗೆ ಮೊರೆಹೋಗಿದ್ದಾರೆ. ಇತ್ತೀಚೆಗೆ ನಡೆದ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ಪಂದ್ಯದ ವೇಳೆ 1,5೦೦ ರೂ. ಮೌಲ್ಯದ ಟಿಕೆಟ್‌ಗಳನ್ನು ವಿತರಿಸಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಅಸಲಿ ಟಿಕೆಟ್ ಹೋಲುವ ನಕಲಿ ಟಿಕೆಟ್‌ಗಳನ್ನು ಸೃಷ್ಟಿಸಿ ಮಾರಾಟ ಮಾಡಿದ್ದರು.

ಪಂದ್ಯ ನೋಡಲು ಬಂದ ಅಭಿಮಾನಿಗಳ ಟಿಕೆಟ್ ಸ್ಕ್ಯಾನ್ ಮಾಡಿದಾಗ ಅವು ಕಾರ್ಯನಿರ್ವಹಿಸದಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ. ಈ ವೇಳೆ ಬೃಹತ್ ನಕಲಿ ಟಿಕೆಟ್ ಜಾಲ ಪತ್ತೆಯಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಏ.೫ರಂದು ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌ಎಕೆ ಪಂದ್ಯದ 1,5೦೦ ರೂ. ಮೌಲ್ಯದ ಟಿಕೆಟ್‌ಗಳನ್ನು ಸಹ ಸಂಪೂರ್ಣವಾಗಿ ಆನ್‌ಲೈನ್‌ನಲ್ಲೇ ವಿತರಿಸಲು ನಿರ್ಧರಿಸಲಾಗಿದೆ. ಆದರೂ, ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರಿಗೆ ವಂಚಿಸಿ, ಅವರಿಂದ ಸಾವಿರಾರು ರೂ.ಗಳಷ್ಟು ಹಣ ಪೀಕಲು ನಕಲಿ ಟಿಕೆಟ್ ಜಾಲ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.ಬೆಂಗಳೂರು: ಇದೀಗ ಐಪಿಎಲ್ ನಕಲಿ ಟಿಕೆಟ್ ಜಾಲ ಉದ್ಭವವಾಗಿದ್ದು ಇದನ್ನು ತಡೆಗಟ್ಟಿ, ನಕಲಿ ಟಿಕೆಟ್ ಮಾರಾಟ ಮಾಡುವವರ ವಿರುದ್ಧ ಕ್ರಮವಹಿಸಲು ಪೊಲೀಸರು ಮುಂದಾಗಿದ್ದಾರೆ.

ಐಪಿಎಲ್ ಕ್ರಿಕೆಟ್ ಹಬ್ಬದ ನಡುವೆಯೇ ಬೆಂಗಳೂರಿನಲ್ಲಿ ನಕಲಿ ಟಿಕೆಟ್ ಜಾಲ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಈ ದಂಧೆಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ಈಗ ಸಂಪೂರ್ಣವಾಗಿ ಆನ್‌ಲೈನ್ ಟಿಕೆಟ್ ವ್ಯವಸ್ಥೆಗೆ ಮೊರೆಹೋಗಿದ್ದಾರೆ. ಇತ್ತೀಚೆಗೆ ನಡೆದ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ಪಂದ್ಯದ ವೇಳೆ 1,5೦೦ ರೂ. ಮೌಲ್ಯದ ಟಿಕೆಟ್‌ಗಳನ್ನು ವಿತರಿಸಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಅಸಲಿ ಟಿಕೆಟ್ ಹೋಲುವ ನಕಲಿ ಟಿಕೆಟ್‌ಗಳನ್ನು ಸೃಷ್ಟಿಸಿ ಮಾರಾಟ ಮಾಡಿದ್ದರು.

ಬೆಂಗಳೂರು ಪೊಲೀಸರು ಈ ಬಾರಿ ಐಪಿಎಲ್ ಟಿಕೆಟ್ ಜೊತೆಯಲ್ಲೇ ಮೆಟ್ರೋ ಟಿಕೆಟ್ ಸೇರಿಸುವ ವಿನೂತನ ಪ್ರಯತ್ನ ಮಾಡಿದ್ದರು. ಈ ಪ್ರಯೋಗಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಬೆಂಗಳೂರಿನ ಈ ಯಶಸ್ವಿ ಮಾದರಿಯನ್ನು ಗಮನಿಸಿರುವ ಮುಂಬೈ, ಚೆನ್ನೆöÊ ಹಾಗೂ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಮೆಟ್ರೋ ಅಧಿಕಾರಿಗಳು ಈಗ ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದಾರೆ. ಈ ವ್ಯವಸ್ಥೆಯನ್ನು ತಮ್ಮ ನಗರಗಳಲ್ಲೂ ಜಾರಿಗೆ ತರುವ ಬಗ್ಗೆ ಮಾಹಿತಿ ಪಡೆಯುತ್ತಿರುವುದು ಬೆಂಗಳೂರು ಪೊಲೀಸರ ಮತ್ತು ಮೆಟ್ರೋ ಆಡಳಿತದ ಹಿರಿಮೆಯನ್ನು ಹೆಚ್ಚಿಸಿದೆ

RELATED ARTICLES

LEAVE A REPLY

Please enter your comment!
Please enter your name here

Most Popular