Saturday, March 28, 2026
Flats for sale
Homeಸಿನಿಮಾಮುಂಬೈ : ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಧುರಂಧರ್ - 2, `1000 ಕೋ. ಬಾಚಿ...

ಮುಂಬೈ : ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಧುರಂಧರ್ – 2, `1000 ಕೋ. ಬಾಚಿ ಹಿಂದಿನ ಎಲ್ಲಾ ರೆಕಾರ್ಡ್ ಉಡೀಸ್ ಮಾಡಿ ಹೊಸ ದಾಖಲೆ.

ಮುಂಬೈ : ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಧುರಂಧರ್-2 ಹೊಸ ದಾಖಲೆ ನಿರ್ಮಿಸಿದೆ. ನಟ ರಣವೀರ್ ಸಿಂಗ್ ಹಾಗೂ ಆದಿತ್ಯ ಧರ್ ನಿರ್ದೇಶಿಸಿರುವ ಹೈವೋಲ್ಟೇಜ್ ಚಿತ್ರ ಬಿಡುಗಡೆಯಾದ ಕೇವಲ 7 ದಿನಗಳಲ್ಲಿ ವಿಶ್ವದಾದ್ಯಂತ ಬರೋಬ್ಬರಿ 1000 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿದೆ. ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಮೊದಲ ಭಾಗದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಬಂದ ಈ ಸೀಕ್ವೆಲ್, ಬಾಲಿವುಡ್‌ನ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಿದೆ.

ಶಾರುಖ್ ಖಾನ್ ಅವರ ಜವಾನ್ ಚಿತ್ರ 18 ದಿನಗಳಲ್ಲಿ ಗಳಿಸಿದ್ದ 1000 ಕೋಟಿ ರೂ. ದಾಖಲೆಯನ್ನು ಅಳಿಸಿ ಹಾಕಿರುವ ಧುರಂಧರ್ 2, ಕೇವಲ 7 ದಿನಗಳಲ್ಲಿ ಈ ಸಾಧನೆ ಮಾಡಿದೆ. ಭಾರತೀಯ ಚಿತ್ರರಂಗದಲ್ಲಿ ಪುಷ್ಪ 2 ನಂತರ ಈ ಮೈಲಿಗಲ್ಲನ್ನು ವೇಗವಾಗಿ ತಲುಪಿದ ಎರಡನೇ ಸಿನಿಮಾ ಇದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular