ಸಿಯೋಲ್ : ನೆರೆಯ ಅಣ್ವಸ್ತ್ರ ರಾಷ್ಟçವಾದ ಉತ್ತರ ಕೋರಿಯಾದಿಂದ ರಕ್ಷಣೆ ಪಡೆ ಯುವ ಉದ್ದೇಶದಿಂದ ತನ್ನ ಕೆಲ ಭೂ ಪ್ರದೇಶವನ್ನು ದಕ್ಷಿಣ ಕೊರಿಯಾ ಅಮೆರಿಕಕ್ಕೆ ಬಿಟ್ಟು ಕೊಟ್ಟಿತ್ತು. ಇಲ್ಲಿ ಅಮೆರಿಕ ತನ್ನ ಆ್ಯಂಟಿ ಮಿಸೈಲ್ ಸಿಸ್ಟಂ ತಂದಿಟ್ಟು ಸದಾ ಉತ್ತರ ಕೊರಿಯಾದ ದಾಳಿಯನ್ನು ಎದುರಿಸಲು ಸಜ್ಜಾಗಿ ನಿಂತಿರುತ್ತಿತ್ತು. ಈಗ ಇಲ್ಲಿನ ಆ್ಯಂಟಿ ಮಿಸೈಲ್ ವ್ಯವಸ್ಥೆಯನ್ನೇ ಮಧ್ಯಪ್ರಾಚ್ಯಕ್ಕೆ ಸ್ಥಳಾಂತರಿಸಲು ಟ್ರಂಪ್ ಮುAದಾಗಿದ್ದು, ಇರಾನ್ ವಿರುದ್ಧ ಬಳಸಲು ಸಿದ್ಧವಾಗಿದೆ.
ಈಗ್ಗೆ ೧೦ ವರ್ಷಗಳ ಹಿಂದೆ ದಕ್ಷಿಣ ಕೊರಿಯಾದ ಸೆಂಗ್ಜು ಎಂಬ ಹಳ್ಳಿಯಲ್ಲಿ ಅಮೆರಿಕವು, ನೆಲದಿಂದ ಆಕಾಶಕ್ಕೆ ಚಿಮ್ಮುವ ರಕ್ಷಣಾತ್ಮಕ ಅತಿ ಎತ್ತರ ಪ್ರದೇಶದ ಕ್ಷಿಪಣಿ ನಿರೋಧಕ ವ್ಯವಸ್ಥೆ' (ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್-ಥಾಡ್’) ಸೇರಿದಂತೆ 28,5೦೦ ತುಕಡಿಗಳನ್ನು ಹೊಂದಿದ ಪ್ರಬಲ ಸೇನಾ ನೆಲೆಯನ್ನು ಸ್ಥಾಪಿಸಿದೆ.ಉತ್ತರ ಕೊರಿಯಾದ ದಾಳಿಯಿಂದ ರಕ್ಷಿಸುವ ಹಾಗೂ ಪ್ರತಿ ದಾಳಿ ನಡೆಸುವ ಒಪ್ಪಂದ ಪ್ರಕಾರ ಥಾಡ್' ಒಳಗೊಂಡ ಅಮೆರಿಕದ ಸೇನಾ ನೆಲೆ ಸ್ಥಾಪನೆಗೆ ದಕ್ಷಿಣ ಕೊರಿಯಾ ತನ್ನ ಜಾಗ ಕೊಟ್ಟಿದೆ. ಆದರೆ ಟ್ರಂಪ್ ಇದೀಗ ತನ್ನಥಾಡ್’ ಹಾಗೂ ಸೇನೆಯ ಕೆಲವು ಭಾಗಗಳನ್ನು ಇರಾನ್ ವಿರುದ್ಧ ದಾಳಿಗೆಂದು ಮಧ್ಯಪ್ರಾಚ್ಯಕ್ಕೆ ಸ್ಥಳಾಂತರಿಸುತ್ತಿದೆ. ದಕ್ಷಿಣ ಕೊರಿಯಾವನ್ನು ರಕ್ಷಿಸುವ ತನ್ನ ಬದ್ಧತೆಯನ್ನು ಮರೆತ ಅಮೆರಿಕದ ಈ ನಡೆಗೆ ಸಹಜವಾಗಿ ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇಯ್ ಮ್ಯೂಂಗ್ ತೀವ್ರ ವಿರೊಧ ಹಾಗೂ ಅತೃಪ್ತಿ ವ್ಯಕ್ತಪಡಿಸಿದ್ದಾರೆ.


