ಮಂಗಳೂರು : ಕುಂಟಿಕಾನ ಬಳಿ ಶಾಲಾ ಮಕ್ಕಳನ್ನು ಅಪಹರಿಸಲಾಗಿದೆ ಎಂದು ಹೇಳುವ ಧ್ವನಿ ಸಂದೇಶವು ಪ್ರಸ್ತುತ ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತರು ವದಂತಿಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು ಈ ವರೆಗೆ ಎಲ್ಲಿಯೂ ಕಾಣೆಯಾದ ದೂರು ಬಂದಿಲ್ಲ.ಧ್ವನಿ ಹಂಚಿಕೊಳ್ಳಲಾಗುತ್ತಿದ್ದ ಮಹಿಳೆಯೊಂದಿಗೆ ಮಾತನಾಡಲಾಗಿದೆ.. ಕೆಲವು ವಿದ್ಯಾರ್ಥಿಗಳು ಹೇಳಿದ ಸುದ್ದಿಯ ಆಧಾರದ ಮೇಲೆ ಹಂಚಿಕೊಂಡಿದ್ದೇನೆ ಎಂದು ನಗರ ಪೊಲೀಸ್ ಆಯುಕ್ತರು ಸುಧೀರ್ ಕುಮಾರ್ ರೆಡ್ಡಿ ಯವರು ತಿಳಿಸಿದ್ದಾರೆ.ಇತ್ತಿಚ್ಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶಗಳು ಹರಿದಾಡುತ್ತಿದ್ದು ಈ ಬಗ್ಗೆ ಆರೋಪಿಗಳ ಕಠೀಣ ಕ್ರಮ ಕೈಗೊಳ್ಳುತ್ತಿದ್ದೇವೆಂದು ತಿಳಿಸಿದ್ದಾರೆ.


