ತಿರುವನಂತಪುರ : ಕೇರಳ ಸ್ಟೋರಿ 2-ಗೋಸ್ ಬಿಯಾಂಡ್ ಮಲೆಯಾಳಂ ಚಿತ್ರ ಫೆ.27ರಂದು ಬಿಡುಗಡೆಯಾಗುವ ಮೊದಲೇ ಭಾರೀ ಸುದ್ದಿ ಮಾಡಿದೆ.
ಸುದೀಪ್ತೋ ಸೇನ್ಚಿ ನಿರ್ದೇಶಿಸಿದ ಈ ಚಿತ್ರದ ಟ್ರೇಲರ್ ಈಚೆಗೆ ಯೂಟ್ಯೂಬ್ನಲ್ಲಿ ಪ್ರಸಾರವಾದ ನಂತರ ಒಂದೇ ದಿನದಲ್ಲಿ 1 ಕೋಟಿ 60 ಲಕ್ಷ ಜನರು ಅದನ್ನು ವೀಕ್ಷಿಸಿದ್ದಾರೆ.
ಟ್ರೇಲರ್ನಲ್ಲಿ ಮಹಿಳೆಯೊಬ್ಬಳಿಗೆ ಬಲವಂತವಾಗಿ ಮಾಂಸ ತಿನ್ನಿಸುವ ದೃಶ್ಯಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿದ್ದರೂ ಮಧ್ಯಪ್ರದೇಶದ ನೈಜ
ಘಟನೆಯಾಗಿದ್ದು ಗಂಡನ ವಿರುದ್ಧವೇ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆಂದು ಚಿತ್ರತಂಡ ಸಮರ್ಥಿಸಿಕೊAಡಿದೆ.
ತನ್ಮಧ್ಯೆ ಜೀವಶಾಸ್ತçಜ್ಞ ಶ್ರೀದೇವ್ ನಂಬೂದಿರಿ ಎಂಬವರು ಚಿತ್ರ ಬಿಡುಗಡೆಗೆ ತಡೆಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಹಾಗೂ ಚಿತ್ರ ನಿರ್ಮಾಪಕರಿಗೆ ನ್ಯಾಯಾಲಯ ನೋಟಿಸ್ ನೀಡಿದೆ. ಕೇರಳ, ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಮೂವರು ಮಹಿಳೆಯರು ಭಯೋತ್ಪಾದಕರ ಕೈಗೆ ಸಿಲುಕಿರುವುದಕ್ಕೆ ಸಂಬAಧಿಸಿದ ವಿಷಯ ಟೀಸರ್ನಲ್ಲಿ ತೋರಿಸಲಾಗಿದೆ. ಇದಕ್ಕೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


