Sunday, February 1, 2026
Flats for sale
Homeಗ್ಯಾಜೆಟ್ / ಟೆಕ್ನವದೆಹಲಿ : ದೇಶದ ಶೇ 21ರಷ್ಟು ಬ್ಯಾಂಕುಗಳಲ್ಲಿ ಮಾತ್ರ AI ತಂತ್ರಜ್ಞಾನ,ಸಮೀಕ್ಷೆಯಲ್ಲಿ ಆರ್‌ಬಿಐ ವರದಿ ಉಲ್ಲೇಖ.

ನವದೆಹಲಿ : ದೇಶದ ಶೇ 21ರಷ್ಟು ಬ್ಯಾಂಕುಗಳಲ್ಲಿ ಮಾತ್ರ AI ತಂತ್ರಜ್ಞಾನ,ಸಮೀಕ್ಷೆಯಲ್ಲಿ ಆರ್‌ಬಿಐ ವರದಿ ಉಲ್ಲೇಖ.

ನವದೆಹಲಿ : ದೇಶದಲ್ಲಿರುವ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಪೈಕಿ ಸದ್ಯ ಶೇ 21ರಷ್ಟು ಮಾತ್ರ ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರಗಳನ್ನು
ಅಭಿವೃದ್ಧಿಪಡಿಸಿಕೊಳ್ಳುತ್ತಿವೆ ಅಥವಾ ಕಾರ್ಯಗತಗೊಳಿಸುತ್ತಿವೆ ಎಂದು 2025-26ರ ಸಾಲಿನ ಆರ್ಥಿಕ ಸಮೀಕ್ಷೆ ತಿಳಿಸಿದೆ.

ದೊಡ್ಡ ಮಟ್ಟದ ಬ್ಯಾಂಕುಗಳಲ್ಲಿಯೇ ಹೆಚ್ಚಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಸಣ್ಣ ಪ್ರಮಾಣದ ಪಟ್ಟಣ ಸಹಕಾರಿ ಸಂಘಗಳಲ್ಲಿ ಈ ತಂತ್ರಜ್ಞಾನ ಅಳವಡಿಕೆ ಈಗಷ್ಟೇ ಆರಂಭವಾಗುತ್ತಿದೆ. ಆದ್ದರಿಂದ ದೇಶದ ಹಣಕಾಸು ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಇನ್ನೂ ಆರಂಭಿಕ ಹAತದಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ.

ಇದೇ ವೇಳೆ ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿ ಅಸಮರ್ಪಕ ಅಂಕಿಅAಶಗಳ ಸೌಲಭ್ಯ, ಸೀಮಿತವಾದ ಕೌಶಲ್ಯಪೂರ್ಣ ಪ್ರತಿಭೆ ಹಾಗೂ ಯಥೋಚಿತವಲ್ಲದ ಆದಾಯ ತೆರಿಗೆ ಬಜೆಟ್ ಸೇರಿದಂತೆ ಹಲವಾರು ಸಮಸ್ಯೆಗಳಿರುವುದರಿಂದ ಕೃತಕ ಬುದ್ಧಿಮತ್ತೆ ಅಳವಡಿಕೆಗೆ ಅಡಚಣೆಯಾಗಿದೆ. ವ್ಯವಸ್ಥಿತ ಅಪಾಯಗಳನ್ನು ತಗ್ಗಿಸಲು ಮತ್ತು ಗ್ರಾಹಕರ ವಿಶ್ವಾಸ ಕಾಪಾಡುವಲ್ಲಿ ಹಣಕಾಸು ಸಂಸ್ಥೆಗಳು ಗ್ರಾಹಕರ ನಂಬಿಕೆಗೆ ಅರ್ಹವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ದಿಸೆಯಲ್ಲಿ ಹಣಕಾಸು ವಲಯದಲ್ಲಿ ಪರಿಣಾಮಕಾರಿ ರೀತಿಯಲ್ಲಿ ಕೃತಕ ಬುದ್ಧಿಮತ್ತೆ ಅಭಿವೃದ್ಧಿಪಡಿಸಿ, ನಿಯೋಜಿಸಿಕೊಳ್ಳಲು ಮತ್ತು ಆಡಳಿತ ವ್ಯವಸ್ಥೆಯಲ್ಲಿ ನಿಯಮಬದ್ಧತೆ ಕಾಪಾಡಲು ಏಳು ಪ್ರಮುಖ ಮಾರ್ಗದರ್ಶಿ ಸೂತ್ರಗಳನ್ನು ಆರ್‌ಬಿಐ ಗುರುತಿಸಿದೆ. ಇವುಗಳಲ್ಲಿ ಜನರೇ ಮೊದಲೆಂಬ ತತ್ವ , ಸಂಯಮಕ್ಕಿAತ ನಾವೀನ್ಯತೆ, ನ್ಯಾಯಸಮ್ಮತತೆ ಮತ್ತು ಸಮಾನತೆ, ಹೊಣೆಗಾರಿಕೆ, ವಿನ್ಯಾಸಗಳ ಮೂಲಕ ವ್ಯವಹಾರಗಳ ಕುರಿತು ಅರ್ಥೈಸುವಿಕೆ ಮತ್ತು ಸುರಕ್ಷತೆ, ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆ ಸೇರಿವೆ

RELATED ARTICLES

LEAVE A REPLY

Please enter your comment!
Please enter your name here

Most Popular