ಶ್ರೀನಗರ : ಏಪ್ರಿಲ್ 22 ರಂದು ಪೆಹಲ್ಗಾಮ್ನಲ್ಲಿ 27 ಪ್ರವಾಸಿಗರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಆದಿಲ್ ಹುಸೇನ್ ಥೋಕರ್ ಎನ್ನಲಾಗಿದೆ.
ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ನಿವಾಸಿ ಆದಿಲ್ ಹುಸೇನ್ ಥೋಕರ್ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ ಆದಿಲ್ ಹುಸೇನ್ ಮೇಲೆ 20 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದ್ದು, ಪೆಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಎಂದು ನಂಬಲಾಗಿದೆ. ಆತ 2018 ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ, ಅಲ್ಲಿ ಭಯೋತ್ಪಾದಕ ತರಬೇತಿ ಪಡೆದಿದ್ದ ಎಂದು ವರದಿಯಾಗಿದೆ.2018 ರಲ್ಲಿ, ಆದಿಲ್ ಅಹ್ಮದ್ ಥೋಕರ್ ಗರ್ರೆಯಲ್ಲಿರುವ ತನ್ನ ಮನೆಯನ್ನು ತೊರೆದು ವಿದ್ಯಾರ್ಥಿ ವೀಸಾದಲ್ಲಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾನೆ. ಭಾರತವನ್ನು ತೊರೆಯುವ ಮೊದಲೇ ಗಡಿಯಾಚೆಯಿಂದ ಕಾರ್ಯನಿರ್ವಹಿಸುತ್ತಿರುವ ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಆದಿಗೆ ಸAಪರ್ಕದಲ್ಲಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಭದ್ರತಾ ಸಂಸ್ಥೆಗಳ ಪ್ರಕಾರ, ಆದಿಲ್ ಈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು, ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಕಮಾಂಡರ್ಗಳಾದ ಸೈಫುಲ್ಲಾ ಕಸೂರಿ ಮತ್ತು ಅಬು ಮೂಸಾ ಅವರೊಂದಿಗೆ ಸೇರಿ ಇದನ್ನು ಯೋಜಿಸಿದ್ದ. ಆದಿಲ್ ಸಾಮಾನ್ಯ ಹಿನ್ನೆಲೆಯಿಂದ ಬಂದಿದ್ದಾನೆ, ಆದರೆ ಅವನ ಒಲವು ಕ್ರಮೇಣ ಉಗ್ರಗಾಮಿತ್ವದ ಕಡೆಗೆ ಹೆಚ್ಚಾಗಿದೆ. ಅವನು ಅಲ್ಲಿಂದ ಕಣ್ಮರೆಯಾದ ನಂತರ ಅವನು ಲಷ್ಕರ್-ಎತೊಯ್ಬಾ ಸೇರಿದ್ದಾನೆ ಎಂಬ ವರದಿಗಳು ಬಂದವು. ಇದಾದ ನಂತರ ಅವರು ಬಹಳ ದಿನಗಳ
ಕಾಲ ಕಾಣಿಸಲಿಲ್ಲ, ಆದರೆ ೨೦೨೪ ರಲ್ಲಿ ಅವರ ಚಟುವಟಿಕೆಗಳು ಮತ್ತೆ ಕಾಣಿಸಿಕೊಂಡವು. ಅವರು ಮೊದಲು ರಾಜೌರಿ-ಪೂಂಚ್ನಂತಹ ಪ್ರದೇಶಗಳಲ್ಲಿ ಮತ್ತು ನಂತರ ದೋಡಾ ಮತ್ತು ಕಿಶ್ವರ್ ನಲ್ಲಿ ಕಾಣಿಸಿಕೊಂಡಿದ್ದಾನೆ.
ಇತ್ತೀಚಿನ ತಿಂಗಳುಗಳಲ್ಲಿ ಆತ ಮತ್ತೆ ಎಲ್ಒಸಿ ದಾಟಿ ಭಾರತಕ್ಕೆ ಪ್ರವೇಶಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬೈಸರನ್ ದಾಳಿಗೂ ಮುನ್ನ ಆದಿಲ್ ಅದೇ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ. ಅವನು ಈಗ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್ ನ ನೆರಳು ಸಂಘಟನೆ ಟಿಆರ್ ಎಫ್ ಜೊತೆ ಸಂಪರ್ಕದಲ್ಲಿದ್ದಾನೆ.
ದಾಳಿಯ ಹೊಣೆಯನ್ನು ಟಿಆರ್ಎಫ್ ಹೊತ್ತುಕೊಂಡಿದೆ. ಆದಿಲ್ ಈ ಹಿಂದೆ ಕೊಕರ್ನಾಗ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಕಮಾಂಡರ್ ಉಜೈರ್ ಜೊತೆ ಸಂಬAಧ ಹೊಂದಿದ್ದ. ದಾಳಿಯ ದಿನ ಸುಮಾರು ನಾಲ್ಕರಿಂದ ಐದು ಭಯೋತ್ಪಾದಕರು ಭಾಗಿಯಾಗಿದ್ದರು. ಇಬ್ಬರು ಸ್ಥಳೀಯ ಭಯೋತ್ಪಾದಕರಲ್ಲಿ ಒಬ್ಬನ ಹೆಸರು ಆದಿಲ್. ದಾಳಿಕೋರರು ಅಮೆರಿಕದ O-4 ಮತ್ತುAK 47/56 ಶಸ್ತçಸಜ್ಜಿತರಾಗಿದ್ದರು. ಶಸ್ತçಸಜ್ಜಿತರಾಗಿದ್ದರು.
ಆದಿಲ್ ಗುಂಡು ಹಾರಿಸಿದ್ದಾಗಿ ಪ್ರತ್ಯಕ್ಷದರ್ಶಿಗಳು ಗುರುತಿಸಿದ್ದಾರೆ. ದಾಳಿಯ ನಂತರ, ಭಯೋತ್ಪಾದಕರು ಸೇನಾ ಸಮವಸ್ತçದಲ್ಲಿ ಪರ್ವತಗಳ ಕಡೆಗೆ ಓಡಿಹೋಗಿದ್ದಾರೆ ಆದಿಲ್ ಮತ್ತು ಆತನ ಸಹಚರರಿಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯವನ್ನು ತೀವ್ರಗೊಳಿಸಿವೆ. ಭಯೋತ್ಪಾದಕ ಆದಿಲ್ ಹುಸೇನ್ ಥೋಕರ್ ಅವರ ತಾಯಿ ಶಹಜಾದಾ ಬಾನೋ, ನನ್ನ ಮಗ ಇದರಲ್ಲಿ ಭಾಗಿಯಾಗಿದ್ದರೆ, ಅವನನ್ನು ಎನ್ಕೌಂಟರ್ನಲ್ಲಿ ಕೊಲ್ಲಬೇಕು ಎಂದು ಹೇಳಿದ್ದಾರೆ.


