Tuesday, July 21, 2026
Homeರಾಜ್ಯಬೆಳಗಾವಿ : ಪ್ರಯಾಗ್‌ರಾಜ್ ಗೆ ತೆರಳುತ್ತಿದ್ದ ಕ್ರೂಸರ್ ವಾಹನ ಅಪಘಾತ,ಗೋಕಾಕ್ ನಗರದ 4 ಜನ ಸಾವು...

ಬೆಳಗಾವಿ : ಪ್ರಯಾಗ್‌ರಾಜ್ ಗೆ ತೆರಳುತ್ತಿದ್ದ ಕ್ರೂಸರ್ ವಾಹನ ಅಪಘಾತ,ಗೋಕಾಕ್ ನಗರದ 4 ಜನ ಸಾವು ..!

ಬೆಳಗಾವಿ : ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಗೋಕಾಕ್ ನಗರದ 4 ಜನರ ಸ್ಥಳದಲ್ಲಿಯೇ ಸಾವನಪ್ಪಿದ್ದು ನಾಲ್ವರ ಸ್ಥಿತಿ ಗಂಭೀರವಾದ ಘಟನೆ ವರದಿಯಾಗಿದೆ .

ಮಧ್ಯಪ್ರದೇಶದ ಜಬಲಪೂರ ಪೆಹರಾ‌ ಟೋಲ್ ನಾಕಾ ಬಳಿ ಇಂದು ಬೆಳಗಿನ ಜಾವ ನಿಂತಿದ್ದ ಬಸ್ ಗೆ ಕ್ರೂಜರ್ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಕಳೆದ ಎರಡು ದಿನಗಳ‌ ಹಿಂದೆ ಗೋಕಾಕ್ ದಿಂದ ಪ್ರಯಾಗ್ ರಾಜ್ ಗೆ ಭಕ್ತರು ಹೊರಟಿದ್ದು ಮೃತರನ್ನು ಬಾಲಚಂದ್ರ ಗೌಡರ, ಬಸವರಾಜ ಕುರಟ್ಟಿ ಒಟ್ಟು ನಾಲ್ಕು ಜನರು ಎಂದು ತಿಳಿದಿದೆ.ಇವರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳು ಎಂಬ ಮಾಹಿತಿ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular