ಮಂಗಳೂರು ; ಕರಾವಳಿ ರತ್ನದ ಚೈತನ್ಯ, ಪರಂಪರೆ ಮತ್ತು ಸೌಂದರ್ಯವನ್ನು ಒಳಗೊಂಡ ಮಂಗಳೂರು ತಣ್ಣೀರು ಬಾವಿ ಬೀಚ್ನಲ್ಲಿ ಮೂರು ದಿನಗಳ ‘ಮಂಗಳೂರು ಬೀಚ್ ಫೆಸ್ಟಿವಲ್ ‘ ಇಂದು ಉದ್ಘಾಟನೆ ಗೊಂಡಿತು. ತಪಸ್ಯ ಫೌಂಡೇಶನ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ನಾನಾ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆದಿದ್ದು ಇಂದು ಹಲವು ಗಣ್ಯರು ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.
ಉದ್ಘಾಟನೆ ನಡೆಸಿ ಬಳಿಕ ಒಡಿಯೂರು ಗುರುದೇವ ನಂದ ಸ್ವಾಮೀಜಿವರು ಮಾತನಾಡಿದ್ದು ಮನುಷ್ಯನ ಬದುಕಿಗೆ ಗುರಿಯಿರಬೇಕು, ರೋಗ ಪಿಡಿತರಾಗಿ ಕೊನೆಯ ಕಾಲಘಟ್ಟದಲ್ಲಿ ಇರುವವರಿಗೆ ಮಾಡುವ ಕಾರ್ಯ ದೊಡ್ಡದು,ತ್ಯಾಗ ಮತ್ತು ಸೇವೆ ಭಾರತದ ಮೌಲ್ಯ, ರೋಗಬಂದ ಮೇಲೆ ಔಷದಿ ಹುಡುಕುವುದ ಕ್ಕಿಂತಲೂ ಬರದಂತೆ ಕಾಪಡುವುದೆ ನಮ್ಮ ಕರ್ತವ್ಯ, ಜಾತಿ ಮತ ಬಿಟ್ಟು ಮಾನವನ ಬಗ್ಗೆ ಚಿಂತನೆ ಮಾಡಬೇಕು ಕ್ರೀಯಾಶಿಲನಾಗಿರು ಕಡಲಿನಂತೆ ಸಮುದ್ರನ್ನು ಗುರುವಗಿಸಿದರು ಚರಿತ್ರೆಯಲ್ಲಿದ್ದಾರೆ, ವಿಸ್ತಾರವಾಗಿ ಗಂಭೀದವಾಗಿದೆ ಕಡಲು ಎಂದು ಹೇಳಿದರು. ಇನ್ನೊಬ್ಬರಿಗೆ ಉಪಕರಿಸುವಂತೆ ಬದುಕಿಸಬೇಕು, ಯಶಸ್ವಿಯಾಗಿ ಗಟ್ಟಿಯಾಗಬೇಕು ತಪಸ್ಯ ಅಂದರೆ ಸಾಧನೆ ಎಂಬ ಶಬ್ದದ ಹೆಸರು ಬರುತ್ತದೆ ಎಂದು ಹಾಡಿ ಹೊಗಳಿದರು. ಮಣ್ಣನ್ನು ಶುದ್ದಿಕರಿಸುವ ಅವಶ್ಯಕತೆವಿದೆ, ಸಾವಯವದಿಂದ ಆರೋಗ್ಯ ಪೂರ್ಣವಾಗುತ್ತದೆ.ಮಣ್ಣು ಶುದ್ಧವಾದರೆ ಮನುಷ್ಯನ ಜೀವವು ಸುದ್ದಿಯಾಗಿರುತ್ತೆ ಎಂದರು. ರೋಗಿಯ ಸೇವೆಯಲ್ಲಿ ತೊಡಗಿಸಿಕೊಳ್ಳುವುದೆ ದೇವಸ್ಥಾನದ ಬ್ರಹ್ಮಕಲಶ ಮಾಡಿದಂತೆ ಪರಿಪೂರ್ಣ ಎಂದು ಹೇಳಿದರು
ಎಂ.ಎಲ್ ಸಿ ಐವನ್ ಡಿಸೋಜಾ ರವರು ಮಾತನಾಡಿದ್ದು ಶಾಸಕರ ಕನಸಿನಂತೆ ,ಮಂಗಳೂರಿನ ಏಕತೆ ಪ್ರದರ್ಶನ ಆಗಬೇಕು,ಕರಾವಳಿ ಭಾಗದಲ್ಲಿ ಹಲವು ಯೋಜನೆಗಳು ಸಂಪೂರ್ಣವಾಗಿ ಪ್ರಜೋಜನ ಮಾಡಲಿಲ್ಲವೆಂಬ ಕೊರಗುವಿದೆ, ಅದರಿಂದ ಪ್ರತಿಬೆ ಅನಾವರಣ ಮಾಡಬೇಕು,ಕೃಷಿ ಮೇಳ,ಬೇರೆ ಬೇರೆ ರೀತಿಯ ವಿನೊದವಳಿ ನೊಡಿದಾಗ, ಸರಕಾರ ದ ಕನಸು ನನಸಾಯಿತು ಎಂದು ಮನವರಿಕೆಯಾಯಿತು .ಈ ಹಿನ್ನೆಲೆ ತಪಸ್ಯ ಪೌಂಡೆಶನ್ ಗೆ ಅಭಿನಂದನೆ ಸಲ್ಲಿಸಿದ್ದು ಮಂಗಳೂರಿನ ಜನ ಬಂದು ಭಾಗವಹಿಸಬೇಕು,ಕಾರ್ಯಕ್ರಮ ಯಶಸ್ವಿಯಾಗಬೇಕು, ಮಂಗಳೂರಿನ ಕೀರ್ತಿ ಹೆಚ್ಚಿಸಬೇಕೆಂದು ಹೇಳಿದರು.
ಈ ಕಾರ್ಯ ಕ್ರಮದಲ್ಲಿ ಪ್ರೋ ಪಿ.ಎಲ್ ಧರ್ಮ,ಗುಣರಂಜನ್ ಶೆಟ್ಟಿ ,ಗುರುನಾಥೆ ಗೌಡ,ಡಾ.ಚಂದ್ರೆ ಗೌಡ,ಪದ್ಮಶ್ರೀ ಉದಯ ಚಂದ್ರ, ಡಾ.ಕರುಣಾ ಸಾಗರ್,ಇರಾಣಿ ಕರುಣಾಸಾಗರ್,ಹರ್ಷ ಗೌಡ ,ಪಿ.ಎಸ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


