ಬೆಂಗಳೂರು : ರಾಜ್ಯವನ್ನೇ ಬೆಚ್ಚಿಬೀಳಿಸಿದ ದೆಹಲಿ ಕೊಲೆ ಮಾದರಿ ನಡುಗಿಸಿದ್ದ ವೈಯಾಲಿಕಾವಲ್ನಲ್ಲಿ ನಡೆದ ಮಹಾಲಕ್ಷ್ಮೀ ಕೊಲೆ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸಿದ್ದಾರೆ. ಮಹಾಲಕ್ಷ್ಮಿಯ ಮೃತದೇಹವನ್ನ ಪೀಸ್ ಪೀಸ್ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕೂಡ ಒಡಿಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈಗಾಗಲೇ ಒಡಿಶಾಗೆ ಬೆಂಗಳೂರು ಪೊಲೀಸರ ತಂಡ ತೆರಳಿದ್ದು ಮಹಾಲಕ್ಷ್ಮಿಯ ಕೊ*ಲೆಯ ಬಳಿಕ ತಲೆಮರೆಸಿಕೊಂಡ ನರರಾಕ್ಷಸ ಮಾಡಿದ ತಪ್ಪಿಗೆ ತಾನೇ ನರಕದ ಬಾಗಿಲು ತಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಮನುಷ್ಯನ ಜೀವಕ್ಕೆ ಬೆಲೆಯಿಲ್ಲದಂತಾಗಿದ್ದು ಈ ಕೊಲೆಯಿಂದ ಮನುಕುಲವೇ ತಲೆತಗ್ಗಿಸುವಂತಾಗಿದೆ. ವೈಯಾಲಿಕಾವಲ್ ಮನೆಯಲ್ಲಿ ಮಹಾಲಕ್ಷ್ಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಮುಕ್ತಿ ರಂಜನ್ ರಾಯ್ ಫ್ರಿಡ್ಜ್ ಆನ್ ಮಾಡಿ ತಪ್ಪಿಸಿಕೊಳ್ಳಲು ಸಮಯ ಸಾಧಿಸಿದ್ದಾನೆ. ಮರ್ಡರ್ ಮಾಡುತ್ತಿದ್ದಂತೆ ಭಯಗೊಂಡ ಆರೋಪಿ ತನ್ನ ತಮ್ಮನಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾನೆ. ತಾನು ಮಾಡಬಾರದ ತಪ್ಪು ಮಾಡಿದ್ದೇನೆ. ಸ್ವಲ್ಪ ದಿನಗಳ ಕಾಲ ಬೆಂಗಳೂರು ಬಿಟ್ಟು ಹೋಗುತ್ತೇನೆ ಎಂದು ತಿಳಿಸಿದ್ದಾನೆ.
ಒಡಿಶಾ ಮೂಲದ ಮುಕ್ತಿ ರಂಜನ್ ರಾಯ್ ಅನ್ನೋನು ಇಲ್ಲಿ ಟೀಮ್ ಹೆಡ್ ಆಗಿದ್ದ. ಮಹಾಲಕ್ಷ್ಮೀ ಬ್ಯೂಟಿಗೆ ಮನಸೋತಿದ್ದ. ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಸೆಪ್ಟೆಂಬರ್ 1 ರಂದು ಕೆಲಸಕ್ಕೆ ಬಂದಿದು, ಮಾರನೇ ದಿನ ಒಟ್ಟಿಗೆ ವೀಕ್ಲಿ ಆಫ್ ತಗೊಂಡಿದ್ದರು. ತನ್ನ ತಾಯಿಗೆ ಫೋನ್ ಮಾಡಿದ್ದ ಮಹಾಲಕ್ಷ್ಮೀ, ಅಮ್ಮ ಮನೆಗೆ ಬರ್ತೀನಿ ಅಂತ ಹೇಳಿದ್ದಳು. ಬಳಿಕ ಅದೇನ್ ಆಯ್ತೋ ಏನೋ.. ಹಂತಕ ಮುಕ್ತಿ ರಂಜನ್ ರಾಯ್ ತನ್ನ ಗೆಳತಿ ಮಹಾಲಕ್ಷ್ಮೀಯನ್ನ ಬರ್ಬರವಾಗಿ ಕೊಲೆ ಮಾಡಿದ್ದ. ಮೃತದೇಹವನ್ನ 50ಕ್ಕೂ ಹೆಚ್ಚು ಪೀಸ್ ಮಾಡಿ, ಫ್ರೀಡ್ಜ್ಗೆ ತುಂಬಿಸಿ ತನ್ನೂರಿಗೆ ಎಸ್ಕೇಪ್ ಆಗಿದ್ದ.ಬೆಂಗಳೂರನ್ನು ಬಿಟ್ಟು ತಲೆಮರೆಸಿಕೊಂಡ ಆರೋಪಿ ಕರ್ನಾಟಕದ ಗಡಿ ದಾಟುತ್ತಿದ್ದಂತೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇಷ್ಟಾದ್ರೂ ಇವನ ಜಾಡು ಹಿಡಿದ ಬೆಂಗಳೂರು ಪೊಲೀಸರು ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ವಿವಿಧೆಡೆ ಒಂದೊಂದು ತಂಡಗಳಾಗಿ ಹುಡುಕಾಟ ನಡೆಸಿದ್ದಾರೆ. ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಮಹಾಲಕ್ಷ್ಮಿಯನ್ನು ಬರ್ಬರವಾಗಿ ಕೊಂದ ಮುಕ್ತಿ ರಂಜನ್ ಒಡಿಶಾದಲ್ಲಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಕೊಲೆ ಬಳಿಕ ತಲೆಮರೆಸಿಕೊಂಡು ಓಡಾಡ್ತಿದ್ದ ಆರೋಪಿಯ ಈಗಾಗಲೇ ಸಾವನ್ನಪ್ಪಿದ್ದಾನೆ ಅನ್ನೋ ಮಾಹಿತಿಯನ್ನು ಬೆಂಗಳೂರು ಪೊಲೀಸರು ಕಲೆ ಹಾಕಿದ್ದಾರೆ. ಆದರೆ ಕೊಲೆ ಯಾವ ಕಾರಣಕ್ಕೆ ನಡೆಯಿತು ಎಂಬುದು ಕಟ್ಟಾ ಕಡೆಗೆ ಉಳಿಯುವ ಪ್ರಶ್ನೆ ..ಯಾಕೆಂದರೆ ಉತ್ತರ ಕೊಡಲು ಇಬ್ಬರೂ ಈ ಪ್ರಪಂಚದಲ್ಲಿಲ್ಲ ..


