ಶಿವಮೊಗ್ಗ : ಉಂಬ್ಳೇಬೈಲು ಅರಣ್ಯ ವ್ಯಾಪ್ತಿಯಲ್ಲಿ ಕಡವೆ ಶಿಕಾರಿ ಮಾಡಿದ್ದ ನಾಲ್ವರು ಆರೋಪಿಗಳನ್ನು ಮಾಂಸ ಸಮೇತ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆದಿದೆ .
ಶಿವಮೊಗ್ಗ ಜಿಲ್ಲೆಯ ಶಿವ, ವೆಂಕಟೇಶ್, ಮಂಜಪ್ಪ, ವಿನೋದ್ ಬಂಧಿತ ಆರೋಪಿಗಳು .ಭದ್ರಾವತಿ ತಾಲೂಕಿನ ಉಂಬ್ಳೇಬೈಲು ಅರಣ್ಯ ವ್ಯಾಪ್ತಿಯಲ್ಲಿ ಕಡವೆ ಶಿಕಾರಿ ಮಾಡಿದ್ದು ಕಡವೆಯ ಮಾಂಸದ ಜೊತೆ ಆರೋಪಿಗಳನ್ನು ಬಂಧಿಸಿದ್ದಾರೆ. ಉಂಬ್ಳೇಬೈಲು ವಲಯ ಅರಣ್ಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


