Saturday, March 14, 2026
Flats for sale
Homeಸಿನಿಮಾಬೆಂಗಳೂರು : ತರುಣ್ ಸುಧೀರ್, ಸೋನಲ್ ಮೊಂತೆರೊ ಜೋಡಿಗೆ ಮದುವೆ ಸಂಭ್ರಮ,ನವಜೋಡಿಗೆ ಸ್ಯಾಂಡಲ್‌ವುಡ್‌ ತಾರೆಯರು, ಗಣ್ಯರಿಂದ...

ಬೆಂಗಳೂರು : ತರುಣ್ ಸುಧೀರ್, ಸೋನಲ್ ಮೊಂತೆರೊ ಜೋಡಿಗೆ ಮದುವೆ ಸಂಭ್ರಮ,ನವಜೋಡಿಗೆ ಸ್ಯಾಂಡಲ್‌ವುಡ್‌ ತಾರೆಯರು, ಗಣ್ಯರಿಂದ ಶುಭಾಶಯ.

ಬೆಂಗಳೂರು : ಸ್ಯಾಂಡಲ್‌ವುಡ್‌ನ ಭರವಸೆಯ ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ಸೋನಲ್‌ ಮೊಂಥೆರೋ ಅವರ ಆರತಕ್ಷತೆಯು ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನಲ್ಲಿ ರಿಸೆಪ್ಶನ್‌ ನಡೆದಿದ್ದು, ಸ್ಯಾಂಡಲ್‌ವುಡ್‌ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ರಾಜಕಾರಣಿಗಳು ಸೇರಿ ನೂರಾರು ಗಣ್ಯರು ರಿಸೆಪ್ಶನ್‌ನಲ್ಲಿ ಭಾಗವಹಿಸಿ, ನೂತನ ಜೋಡಿಗೆ ಶುಭ ಹಾರೈಸಿದ್ದಾರೆ. ಇಂದು (ಆಗಸ್ಟ್‌ 11) ಮದುವೆ ಸಮಾರಂಭ ನಡೆಯಲಿದ್ದು, ಇನ್ನಷ್ಟು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಸ್ಯಾಂಡಲ್​ವುಡ್​ ನಟ, ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೊ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದೆ. ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ತರುಣ್‌-ಸೋನಲ್‌ ಆರತಕ್ಷತೆ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಸೇರಿ ತಾರಾಗಣವೇ ಆಗಮಿಸಿ ಜೋಡಿಗೆ ಶುಭಹಾರೈಸಿದೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡ ಆಗಮಿಸಿ ನವಜೋಡಿಗೆ ಶುಭಹಾರೈಸಿದರು.

ಸಿನಿಮಾ ಕಾನ್ಸೆಪ್ಟ್‌ನಲ್ಲಿಯೇ ಸಿದ್ಧವಾದ ವೇದಿಕೆ ಮೇಲೆ ತರುಣ್‌ ಸುಧೀರ್‌ ಹಾಗೂ ಸೋನಲ್‌ ಮೊಂಥೆರೋ ಅವರು ಮಿಂಚಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಟ ಪ್ರೇಮ್‌, ನಟಿಯರಾದ ಮಾಲಾಶ್ರೀ, ಆರಾಧನಾ ಮಾಲಾಶ್ರೀ, ಪ್ರೇಮಾ, ನಿರ್ಮಾಪಕ ಕೆ.ಮಂಜು, ನಟ ರಮೇಶ್‌ ಅರವಿಂದ್‌ ಸೇರಿ ಹಲವು ಸೆಲೆಬ್ರಿಟಿಗಳು, ಗಣ್ಯರು ನೂತನ ಜೋಡಿಗೆ ಶುಭ ಕೋರಿದರು..

ಕಿಚ್ಚ ಸುದೀಪ್ ಸೇರಿ ಹಲವು ನಟ, ನಟಿಯರು, ನಿರ್ದೆಶಕರನ್ನು ಭೇಟಿಯಾಗಿ ತರುಣ್ ಸುಧೀರ್​ ಅವರು ಮದುವೆಯ ಆಮಂತ್ರಣ ನೀಡಿದ್ದಾರೆ. ರಚಿತಾ ರಾಮ್​, ಉಪೇಂದ್ರ, ರಾಘವೇಂದ್ರ ರಾಜ್​ಕುಮಾರ್​ ಅವರಿಗೂ ತರುಣ್​ ಸುಧೀರ್​ ಆಹ್ವಾನ ನೀಡಿದ್ದಾರೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರನ್ನು ತರುಣ್​ ಸುಧೀರ್​ ಅವರು ಮದುವೆಗೆ ಆಹ್ವಾನಿಸಿದ್ದಾರೆ. ಇವರೆಲ್ಲರೂ ಭಾನುವಾರ ಮದುವೆಗೆ ಹಾಜರಾಗುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

Most Popular