Thursday, July 23, 2026
Homeದೇಶಬೆಂಗಳೂರು : ಹ್ಯಾಂಡ್‌ಬ್ರೇಕ್‌ ಹಾಕದ ಚಾಲಕ : ಕಾರು ಕಂದಕಕ್ಕೆ ಉರುಳಿ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ...

ಬೆಂಗಳೂರು : ಹ್ಯಾಂಡ್‌ಬ್ರೇಕ್‌ ಹಾಕದ ಚಾಲಕ : ಕಾರು ಕಂದಕಕ್ಕೆ ಉರುಳಿ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಮೂವರು ಜಮ್ಮು ಕಾಶ್ಮೀರದಲ್ಲಿಸಾವು.

ಬೆಂಗಳೂರು : ಕಾರು ಚಾಲಕ ಹ್ಯಾಂಡ್‌ಬ್ರೇಕ್‌ ಹಾಕಲು ಮರೆತ್ತಿದ್ದರಿಂದ ಕಾರು ಕಂದಕಕ್ಕೆ ಉರುಳಿ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಒಂದೇ ಕುಟುಂಬದ ಮೂವರು ಸಾವನಪ್ಪಿದ ಘಟನೆ ಜಮ್ಮು ಕಾಶ್ಮೀರದಲ್ಲಿನಡೆದಿದೆ.

ಬೆಂಗಳೂರು ನಿವಾಸಿಗಳಾದ ತಂದ್ರಾ ದಾಸ್(67) ಮೊನಾಲಿಸಾ ದಾಸ್(41) ಹಾಗೂ ಮತ್ತೊಬ್ಬ ಪುರುಷ ಸಾವಿಗೀಡಾಗಿದ್ದಾರೆ. ಬಾಲಕಿ ಅದ್ರಿತಾ ಖಾನ್(9) ಎಂಬಾಕೆಗೆ ಗಾಯಗಳಾಗಿವೆ. ಇವರು ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್ ನಿವಾಸಿಗಳಾಗಿದ್ದಾರೆ .

ಅಮರನಾಥ ಯಾತ್ರೆ ಸಮೀಪದ ಝೋಜಿಲ್ ಪಾಸ್ ಬಳಿ ಕಾರು ಪ್ರಪಾತಕ್ಕೆ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ದುರಂತ ಅಂದ್ರೆ ಚಾಲಕ ಹ್ಯಾಂಡ್​ ಬ್ರೇಕ್ ಹಾಕದೇ ಇಳಿದು ಹೋಗಿದ್ದರಿಂದ ಕಾರು ತನ್ನಷ್ಟಕ್ಕೆ ತಾನೇ ಮೂವ್ ಆಗಿ ಕಂದಕಕ್ಕೆ ಉರುಳಿಬಿದ್ದಿದೆ.

ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದ ಕುಟುಂಬ ಅಲ್ಲಿನ ಬಾಡಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿತ್ತು. ಹಾದಿಯಲ್ಲಿ ಎದುರಿದ್ದ ಕಾರೊಂದು ಕೆಟ್ಟು ನಿಂತಿದ್ದು, ಅದೇನೆಂದು ನೋಡಲು ಈ ಕಾರು ಚಾಲಕ ಇಳಿದಿದ್ದ. ಇಳಿಯುವಾಗ ಕಾರಿನ ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ. ಹೀಗಾಗಿ ಜಾರಿ ಹೋದ ಕಾರು ಪ್ರಪಾತಕ್ಕೆ ಉರುಳಿದೆ. ಮೃತದೇಹಗಳನ್ನು ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಹೊರತೆಗೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular