ಚೆನ್ನೈ : ಮಂಗಳವಾರ ಸಂಜೆ ಯೆರ್ಕಾಡ್ನಲ್ಲಿ ಖಾಸಗಿ ಬಸ್ ಕಮರಿಗೆ ಉರುಳಿ ಐವರು ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.
ಸಂಜೆ 6 ಗಂಟೆ ಸುಮಾರಿಗೆ ಖಾಸಗಿ ಬಸ್ಸೊಂದು ಯೆರ್ಕಾಡ್ನಿಂದ ಸೇಲಂಗೆ 56 ಪ್ರಯಾಣಿಕರೊಂದಿಗೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 13ನೇ ಹೇರ್ಪಿನ್ ತಿರುವಿನಲ್ಲಿ ಬಸ್ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ಸೈಡ್ವಾಲ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ಕಮರಿಗೆ ಬಿದ್ದಿದ್ದು, 11ನೇ ತಿರುವಿಗೆ ಬಿದ್ದಿದೆ.
ಅಪಘಾತದಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು,ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ‘108’ ಆಂಬ್ಯುಲೆನ್ಸ್ ಮತ್ತು ಯೆರ್ಕಾಡ್ ನಿವಾಸಿಗಳ ಕೆಲವು ಖಾಸಗಿ ವಾಹನಗಳಲ್ಲಿ ಸೇಲಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ 46 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಮೂವರ ಪರಿಸ್ಥಿತಿ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.