Friday, March 13, 2026
Flats for sale
Homeಜಿಲ್ಲೆಮಂಗಳೂರು : ಚರ್ಚ್ ನ ಧರ್ಮಗುರುವಿನಿಂದ ವೃದ್ಧ ದಂಪತಿಗಳ ಮೇಲೆ ಹಲ್ಲೆ ಪ್ರಕರಣ : ದಂಪತಿಯನ್ನು...

ಮಂಗಳೂರು : ಚರ್ಚ್ ನ ಧರ್ಮಗುರುವಿನಿಂದ ವೃದ್ಧ ದಂಪತಿಗಳ ಮೇಲೆ ಹಲ್ಲೆ ಪ್ರಕರಣ : ದಂಪತಿಯನ್ನು ಬಹಿಷ್ಕರಿಸಿದ ಕ್ರೈಸ್ತ ಸಮುದಾಯ.

ಮಂಗಳೂರು : ಮನೆಲ ಚರ್ಚ್ ಪ್ರಧಾನ ಧರ್ಮಗುರುವೋರ್ವರು ತಮ್ಮದೇ ಚರ್ಚ್ ವ್ಯಾಪ್ತಿಯ ಹಿರಿಯ ಪ್ರಾಯಸ್ಥ ದಂಪತಿಗೆ ಕಾಲರ್ ಎಳೆದು ಎಳೆದಾಡಿ, ಹೊಡೆದ ಘಟನೆ ಫೆ.29 ರಂದು ನಡೆದಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚ್‌ನ ಪಾದ್ರಿಯೊಬ್ಬರಿಂದ ಹಲ್ಲೆಗೊಳಗಾದ ವೃದ್ಧ ದಂಪತಿಯನ್ನು ಗ್ರಾಮದ ಕ್ರೈಸ್ತ ಸಮುದಾಯದವರು ಬಹಿಷ್ಕರಿಸಿದ್ದಾರೆ.

ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ(79ವ.) ದಂಪತಿ ಮನೆಗೆ ಚರ್ಚ್ ಧರ್ಮಗುರು ಫಾ.ನೆಲ್ಸನ್ ಓಲಿವೆರಾರವರು ಮನೆ ಶುದ್ಧ ಭೇಟಿ ನಿಮಿತ್ತ ತೆರಳಿದ್ದು ಆ ವೇಳೆ ಧರ್ಮಗುರು ಫಾ.ನೆಲ್ಸನ್ ರವರು ಪ್ರಾಯಸ್ಥ ದಂಪತಿ ಚರ್ಚ್ ಗೆ ಯಾವುದೇ ದೇಣಿಗೆ, ವಂತಿಗೆ ನೀಡದೆ ಸಹಕರಿಸುತ್ತಿಲ್ಲ ಎಂದೆಲ್ಲ ಹೇಳಿ ಆ ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಮಾತ್ರವಲ್ಲ ಕಾಲರ್ ಹಿಡಿದು ಮಾರುದ್ಧ ದೂರ ಎಳೆದುಕೊಂಡು ಹೋಗಿ ಹೊಡೆಯುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.ಹಲ್ಲೆ ಮಾಡುವ ವಿಡಿಯೋ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದ್ದು ತನ್ನ ತಂದೆ-ತಾಯಿ ಸಮಾನವಾದ ದಂಪತಿಗೆ ಪಾದ್ರಿ ನೆಲ್ಸನ್ ರವರು ತೋರಿದ ಅತಿರೇಕದ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿದ ದಂಪತಿ ಗ್ರೆಗೊರಿ ಮೊಂಥೆರೊ ಮತ್ತು ಫಿಲೋಮಿನಾ ಕೊಯೆಲೊ ರವರು ಮೊದಲಿಗೆ, ಚರ್ಚ್‌ಗೆ ಸಂಪರ್ಕ ಹೊಂದಿದ ಎಲ್ಲಾ ವಾಟ್ಸಾಪ್ ಗುಂಪುಗಳಿಂದ ನಮ್ಮನ್ನು ತೆಗೆದುಹಾಕಲಾಯಿತು. ನಂತರ ಹಳ್ಳಿಯ ಸಮುದಾಯದ ಜನರು ಇದ್ದಕ್ಕಿದ್ದಂತೆ ನಮ್ಮೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರು. ಪ್ರಕರಣವನ್ನು ದುರ್ಬಲಗೊಳಿಸಲು ಮಂಗಳೂರು ಧರ್ಮಪ್ರಾಂತ್ಯವು ಪೊಲೀಸರ ಮೇಲೆ ಒತ್ತಡ ಹೇರುವ ಮೂಲಕ ಆರೋಪಿ ಪಾದ್ರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪೊಲೀಸ್ ಇಲಾಖೆ ಯಿಂದಲೂ ನಮಗೆ ನ್ಯಾಯ ಸಿಗದೇ ಇದ್ದದ್ದು ಬೇಸರದ ಸಂಗತಿಯೆಂದು ತಿಳಿಸಿದ್ದಾರೆ.ದೂರು ನೀಡಿದರು ತನಿಖೆ ಆರಂಬಿಸದೆ ಇರುವುದು ರಾಜಕೀಯ ಪ್ರೇರಿತ ಎಂದು ಸುದ್ದಿಗಾರರಿಗೆ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular