Thursday, July 23, 2026
Homeವಿದೇಶಬಾಲ್ಟಿಮೋರ್ : ಬಾಲ್ಟಿಮೋರ್ ಸೇತುವೆಗೆ ಡಿಕ್ಕಿ ಹೊಡೆದ ಸಿಂಗಾಪೂರ ಮೂಲದ ಹಡಗು.

ಬಾಲ್ಟಿಮೋರ್ : ಬಾಲ್ಟಿಮೋರ್ ಸೇತುವೆಗೆ ಡಿಕ್ಕಿ ಹೊಡೆದ ಸಿಂಗಾಪೂರ ಮೂಲದ ಹಡಗು.

ಬಾಲ್ಟಿಮೋರ್ : ಮಂಗಳವಾರ ಮುಂಜಾನೆ ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಕಬ್ಬಿಣದ ಸೇತುವೆ ಹಡಗಿನ ಮೇಲೆ ಬಿದ್ದ ಪರಿಣಾಮ ಹಡಗು ಮತ್ತಷ್ಟು ನೀರಿನ ಆಳಕ್ಕೆ ಇಳಿದಿದೆ. ಅದೃಷ್ಟವಶಾತ್ ಹಡಗಿನ ಎಲ್ಲಾ 21 ಭಾರತೀಯ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಆದರೆ ಸೇತುವೆ ಮೇಲೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳ ಪೈಕಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. 6 ಮಂದಿ ನಾಪತ್ತೆಯಾಗಿದ್ದಾರೆ.

“ಸಿಂಗಾಪೂರ್-ಧ್ವಜದ ಕಂಟೈನರ್ ಹಡಗಿನ ಮಾಲೀಕರು ಮತ್ತು ನಿರ್ವಾಹಕರು ‘DALI’ (IMO 9697428) ದಾಲಿ ಅನ್ನೋ ಹಡಗು ಸರಕು ತುಂಬಿ ಅಮೆರಿಕದ ಬಾಲ್ಟಿಮೋರ್ ಮೂಲಕ ಸಾಗಿತ್ತು. ಈ ವೇಳೆ ಹಡಗಿನಲ್ಲಿ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಬಾಲ್ಟಿಮೋರ್ ಬಳಿ ಇರುವ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಸಮೀಪಕ್ಕೆ ಬರುತ್ತಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಏಕಾಏಕಿ ಹಡಗಿನ ವಿದ್ಯತ್ ಸಂಪರ್ಕ ಕಡಿತಗೊಂಡಿದೆ. ಇದರ ಪರಿಣಾಮ ಹಡಗು ನಿಯಂತ್ರಣ ತಪ್ಪಿ ನೇರವಾಗಿ ಸೇತುಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಅಪಘಾತ ಸಂಭವಿಸುತ್ತಿದ್ದಂತೆ ರಕ್ಷಣಾ ತಂಡಗಳು ನೆರವಿಗೆ ಧಾವಿಸಿದೆ. ಸಣ್ಣ ಬೋಟುಗಳ ಮೂಲಕ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಇದೇ ವೇಳೆ ಹೆಲಿಕಾಪ್ಟರ್‌ನ್ನೂ ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಸೇತುವೆ ದುರಸ್ತಿ ಕಾರ್ಯ ಮಾಡುತ್ತಿದ್ದ ಸಿಬ್ಬಂದಿಗಳ ಪೈಕಿ 6 ಮಂದಿ ನಾಪತ್ತೆಯಾಗಿದ್ದಾರೆ. ಹುಡುಕಾಟ ಮುಂದುವರಿದಿದೆ. ಎಂದು ಮಾಧ್ಯಮ ವರದಿಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular