Friday, March 13, 2026
Flats for sale
Homeದೇಶನವದೆಹಲಿ : ಕಾಂಗ್ರೆಸ್ ನಾಲ್ಕನೇ ಪಟ್ಟಿ ಬಿಡುಗಡೆ : ಮಾಜಿ IAS ಅಧಿಕಾರಿ ಸಸಿಕಾಂತ್ ಸೆಂಥಿಲ್...

ನವದೆಹಲಿ : ಕಾಂಗ್ರೆಸ್ ನಾಲ್ಕನೇ ಪಟ್ಟಿ ಬಿಡುಗಡೆ : ಮಾಜಿ IAS ಅಧಿಕಾರಿ ಸಸಿಕಾಂತ್ ಸೆಂಥಿಲ್ ಗೆ ಟಿಕೆಟ್, ವಾರಾಣಸಿಯಲ್ಲಿ ಮೋದಿ ವಿರುದ್ಧ ಮತ್ತೆ ಅಜಯ್ ರಾಯ್ ಸ್ಪರ್ಧೆ.

ನವದೆಹಲಿ : ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ನಾಲ್ಕನೇ ಪಟ್ಟಿಯನ್ನು ಶನಿವಾರ ರಾತ್ರಿ ಬಿಡುಗಡೆ ಮಾಡಿದೆ. ದಕ್ಷಿಣ ಕನ್ನಡದ ಮಾಜಿ ಐಎಸ್​ಎ ಅಧಿಕಾರಿ ಸಸಿಕಾಂತ್​ ಸೆಂಥಿಲ್​ ಕಾಂಗ್ರೆಸ್​ ಸೇರಿದಾಗಿನಿಂದಲೂ ಕರ್ನಾಟಕ ಕಾಂಗ್ರೆಸ್​ನ ಐಟಿ ಸೆಲ್​ನಲ್ಲಿದ್ದರು. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ನೆರವಾಗಿದ್ದೇ 5 ಗ್ಯಾರಂಟಿ ಯೋಜನೆಗಳು. ಆ 5 ಗ್ಯಾರಂಟಿ ಯೋಜನೆಗಳ ಹಿಂದೆ ಸಸಿಕಾಂತ್ ಸೆಂಥಿಲ್​ ಪ್ರಮುಖ ಪಾತ್ರವಾಗಿತ್ತು. ಇದೀಗ ಐಎಎಸ್ ಅಧಿಕಾರಿ ಹಾಗೂ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಅವರು ತಮಿಳುನಾಡಿನ ತಿರುವಳ್ಳೂರು ಎಸ್‌ಸಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಹಿಂದಿಹಾರ್ಟ್​ ಲ್ಯಾಂಡ್​ ರಾಜ್ಯಗಳನ್ನೇ ಗಮನದಲ್ಲಿಟ್ಟುಕೊಂಡು ದೊಡ್ಡ ದೊಡ್ಡ ಹಿರಿ ತಲೆಗಳಿಗೆ ಕಾಂಗ್ರೆಸ್​ ಟಿಕೆಟ್​ ನೀಡಿದೆ. ಬರೋಬ್ಬರಿ 33 ವರ್ಷಗಳ ಬಳಿಕ ದಿಗ್ವಿಜಯ್​ ಸಿಂಗ್​ ತಮ್ಮ ಭದ್ರಕೋಟೆಯಾದ ಹಳೆಯ ಕ್ಷೇತ್ರ, ರಾಜ್ ಘರ್ ​ನಿಂದ ಅಖಾಡಕ್ಕೆ ಇಳಿದಿದ್ದಾರೆ.

ವಾರಣಾಸಿಯಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಜಯ್ ರೈ ಅವರನ್ನು ಸತತ ಮೂರನೇ ಬಾರಿಗೆ ಪ್ರಧಾನಿ ಮೋದಿ ವಿರುದ್ಧ ಕಣಕ್ಕಿಳಿಸಿದೆ. ಮೋದಿ ವಿರುದ್ಧ ಎರಡು ಬಾರಿ ಸೋತಿದ್ದಾರೆ.

ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ ಕಾರ್ತಿ ಚಿದಂಬರಂ, ಅಮ್ರೋಹಾದಿಂದ ಡ್ಯಾನಿಶ್ ಅಲಿ, ಸಹರಾನ್‌ಪುರದಿಂದ ಇಮ್ರಾನ್ ಮಸೂದ್, ಹರಿದ್ವಾರದಿಂದ ವೀರೇಂದ್ರ ರಾವತ್ ಮತ್ತು ಮಧ್ಯಪ್ರದೇಶದ ರಾಜ್‌ಗಢದಿಂದ ದಿಗ್ವಿಜಯ್ ಸಿಂಗ್ ಟಿಕೆಟ್ ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular