ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಹಣಕಾಸು ಸಚಿವರಾಗಿ ಸೀತಾರಾಮನ್ ಮಂಡಿಸಲಿರುವ 6 ನೇ ಬಜೆಟ್ ಇದಾಗಿದೆ. ಹಾಗೆಯೇ ಪ್ರಧಾನಿ ಮೋದಿ ಸರ್ಕಾರದ 2 ನೇ ಅವಧಿಯ ಕೊನೆಯ ಬಜೆಟ್ ಕೂಡ ಇದಾಗಿರಲಿದೆ.ಬಡವರು, ಮಹಿಳೆಯರು, ಯುವಜನತೆ ಹಾಗೂ ಅನ್ನದಾತರ ಕಲ್ಯಾಣಕ್ಕೆ ಒತ್ತು ನೀಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ವಿಕಸಿತ ಭಾರತದ ಗುರಿ ಸಾಧಿಸುವ ಬಜೆಟ್ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು ಮಂಡಿಸಿದರು.
ಮಧ್ಯಂತರ ಬಜೆಟ್ ಮಂಡನೆ ನಂತರ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಬಜೆಟ್ ಯುವ ಭಾರತದ ಯುವ ಆಕಾಂಕ್ಷೆಗಳ ಪ್ರತಿಬಿಂಬವನ್ನು ಹೊಂದಿದೆ. ಬಜೆಟ್ನಲ್ಲಿ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಂಶೋಧನೆ ಮತ್ತು ಆವಿಷ್ಕಾರಕ್ಕಾಗಿ, 1 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಘೋಷಿಸಲಾಗಿದೆ.
ಕೇಂದ್ರದ ಬಜೆಟ್ನಲ್ಲಿ ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಳೆಯ ಆದಾಯ ತೆರಿಗೆ ಪದ್ಧತಿಯಂತೆ 7 ಲಕ್ಷ ರೂ.ಗಳವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯ್ತಿ ಮುಂದುವರೆದಿದೆ.
ಲೋಕಸಭಾ ಚುನಾನವಣೆಯ ಹೊಸ್ತಿನಲ್ಲಿ ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಯಾವುದೇ ಅಗ್ಗದ, ಜನಪ್ರಿಯ ಯೋಜನೆಗಳನ್ನು ಹೆಚ್ಚಾಗಿ ಘೋಷಿಸದೆ, ೧ ಕೋಟಿ ಬಡವರ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ನೀಡುವ ಘೋಷಣೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆಯನ್ನು ಮಾಡಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ನ್ನು ಮಂಡಿಸಿ, 2047 ರ ವೇಳೆಗೆ ವಿಕಸಿತ ಭಾರತದ ಮಂತ್ರ ಪಠಿಸಿದ್ದಾರೆ.
ಈ ಬಜೆಟ್ ಮಂಡನೆ ಸಂದರ್ಭದಲ್ಲಿ ಬಡವರು, ಮಹಿಳೆಯರು, ಯುವಜನತೆ ಮತ್ತು ಅನ್ನದಾತ ರೈತ ನಮ್ಮ ಸರ್ಕಾರದ ನಾಲ್ಕು ಜಾತಿಗಳು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿ, ಈ ವರ್ಗದ ಅಭಿವೃದ್ಧಿಯೇ ಸರ್ಕಾರದ ಆದ್ಯತೆ ಎಂದು ಹೇಳಿದರು. ತಮ್ಮ ಈ ಬಜೆಟ್ನ್ನು ಸರ್ವ ಸ್ಪರ್ಶಿ, ಸರ್ವ ವ್ಯಾಪಿ, ಸರ್ವಾಂಗೀಣ
ಅಭಿವೃದ್ಧಿಯ ಬಜೆಟ್ ಎಂದು ಹೇಳಿರುವ ನಿರ್ಮಲಾ ಸೀತಾರಾಮನ್, ಬಜೆಟ್ ಭಾಷಣದಲ್ಲಿ ಕೇಂದ್ರ ಸರ್ಕಾರದ ಹತ್ತು ವರ್ಷಗಳ ಸಾಧನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಕೇಂದ್ರದ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಯಾವೆಲ್ಲಾ ವಲಯಗಳಿಗೆ ಆದ್ಯತೆ ನೀಡಿ, ಏನೆಲ್ಲಾ ಸಾಧನೆ ಮಾಡಿದೆ, ಯಾವೆಲ್ಲಾ ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಏನೆಲ್ಲಾ ವರ್ಗಗಳಿಗೆ ಈ ಕಾರ್ಯಕ್ರಮಗಳಿಂದ ಲಾಭವಾಗಿದೆ ಎಂಬುದನ್ನೆಲ್ಲಾ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ರಾಜಕೀಯ ಘೋಷಣೆಯಾಗಿರುವ ಸಾಮಾಜಿಕ ನ್ಯಾಯದ ಬಗ್ಗೆಯೂ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿರುವ ಅವರು, ಸಾಮಾಜಿಕ ನ್ಯಾಯ ಕೆಲವರಿಗೆ ರಾಜಕೀಯ ಘೋಷಣೆಯಾಗಿರಬಹುದು. ಆದರೆ, ನಮಗೆ ಮಾತ್ರ ಸಾಮಾಜಿಕ ನ್ಯಾಯ ಆಡಳಿತ ಮಾದರಿ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯದೊಂದಿಗೆ ಕೆಲಸ ಮಾಡುತ್ತಿದೆ ಎಂಬುದನ್ನು ಬಜೆಟ್ಭಾ ಷಣದಲ್ಲಿ ಪ್ರತಿಪಾದಿಸಿದರು. ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಯನ್ನೂ ಮಾಡಿದೆ. ಜತೆ ಜತೆಗೆ ದೇಶದ ಆರ್ಥಿಕ ಸುಧಾರಣೆಯನ್ನು ಮಾಡುವ ಮೂಲಕ 2047ರ ವೇಳೆಗೆ ವಿಕಸಿತ ಭಾರತದ ಗುರಿ ಸಾಧಿಸಿ ದೇಶವನ್ನು ಬಲಿಷ್ಠ ರಾಷ್ಟçವನ್ನಾಗಿಸುವ ಸಂಕಲ್ಪವನ್ನು ಭಾಷಣದಲ್ಲಿ ಪ್ರಸ್ತಾಪಿಸಿದರು. ಸಬ್ಕಾ ಸಾತ್ ಸಬ್ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರದೊAದಿಗೆ ಸರ್ಕಾರ ಹತ್ತು ವರ್ಷಗಳಲ್ಲಿ ಹಲವು ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿದ್ದು ಈ ಎಲ್ಲ ಯೋಜನೆಗಳು ಎಲ್ಲರ ಮನೆ ಮನೆಗೆ ತಲುಪಿವೆ ಎಂದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 6 ನೇ ಬಜೆಟ್ ಮಂಡಿಸುವ ಮೂಲಕ ಸತತ 6 ನೇ ಬಜೆಟ್ ಮಂಡಿಸಿದ ಮಾಜಿ ಪ್ರಧಾನಿ ವಿತ್ತ ಸಚಿವ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಿದರು. ಕೇಂದ್ರದ ವಿತ್ತ ಸಚಿವರಾಗಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಸತತ 6 ಬಜೆಟ್ಗಳನ್ನು ಮಂಡಿಸಿದ್ದರು. ಈ ದಾಖಲೆಯನ್ನು ಇಂದು ಸರಿಗಟ್ಟಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ೬ನೇ ಬಜೆಟ್ನ್ನು ಲೋಕಸಭೆಯಲ್ಲಿಂದು ಮಂಡಿಸಿದರು. ಹಣಕಾಸು ಸಚಿವರಾಗಿ ಬಜೆಟ್ಮಂ ಡಿಸಿದ ಎರಡನೇ ಮಹಿಳೆ ಎಂಬ ಕೀರ್ತಿಗೂ ನಿರ್ಮಲಾ ಸೀತಾರಾಮನ್ಭಾ ಜನರಾಗಿದ್ದಾರೆ.
ಕೇಂದ್ರದ ಬಜೆಟ್ನಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗಿದ್ದು, ರಸ್ತೆ ಅಭಿವೃದ್ಧಿ, ರೈಲ್ವೆ ವಿಮಾನಯಾನ, ಮೆಟ್ರೋ ಸಂಪರ್ಕದ ಉನ್ನತೀಕರಣದ ಯೋಜನೆಗಳನ್ನು ಪ್ರಕಟಿಸಲಾಗಿದೆ. ಹಾಗೆಯೇ ವಿದ್ಯುತ್ ಚಾಲಿತ ವಾಹನಗಳ ಬಳಕೆಗೂ ಬಜೆಟ್ನಲ್ಲಿ ಒತ್ತು ನೀಡುವ ಅಂಶಗಳಿವೆ. ದೇಶದ ಸಣ್ಣ ಸಣ್ಣ ನಗರಗಳಿಗೂ ಮೆಟ್ರೋ ಸಂಪರ್ಕದ ಘೋಷಣೆಯನ್ನು ಬಜೆಟ್ನಲ್ಲಿ ಮಾಡಲಾಗಿದ್ದು, ಒಂದೇ ಭಾರತ್ ರೈಲುಗಳ ಓಡಾಟ ಸಂಖ್ಯೆಯನ್ನು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.
ವಿಮಾನಯಾನ ಕ್ಷೇತ್ರದ ಅಭಿವೃದ್ಧಿಗೂ ಒತ್ತು ನೀಡಲಾಗಿದೆ. 40 ಸಾವಿರ ರೈಲ್ವೆ ಬೋಗಿಗಳ ಉನ್ನತೀಕರಣದ ಘೋಷಣೆ ಮಾಡಲಾಗಿದೆ. ಸಣ್ಣ ನಗರಗಳಲ್ಲಿ ಮೆಟ್ರೋ ಸಂಪರ್ಕ ವಿಸ್ತರಿಸುವ ಮೆಟ್ರೋ ನಮೋ ಭಾರತ್ ಯೋಜನೆಯ ಘೋಷಣೆ ಮೂಲಕ ನಗರಗಳ ಮೆಟ್ರೋ ರೈಲುಗಳ ವಿಸ್ತರಣೆಯನ್ನು ಬಜೆಟ್ನಲ್ಲಿ ಪ್ರಕಟಿಸಲಾಗಿದೆ.


