ಅಯೋಧ್ಯೆ : ರಾಮನೂರಿನಲ್ಲಿ 500 ವರ್ಷಗಳ ಬಳಿಕ ಸರಯೂ ನದಿ ದಡದಲ್ಲಿರುವ ಅಯೋಧ್ಯೆಯ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯಾಗಿರುವ ಬೆನ್ನಲ್ಲೆ ಬಾಲರಾಮನನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಅಯೋಧ್ಯೆಗೆ ಹರಿದು ಬರುತ್ತಿದೆ. ಕೊರೆವ ಚಳಿಯನ್ನೂ ಲೆಕ್ಕಿಸದೆ ತಡರಾತ್ರಿ 2 ಗಂಟೆಯಿAದಲೇ ರಾಮನ ದರ್ಶನ ಪಡೆಯಲು ಕಾದು ಕುಳಿತ್ತಿದ್ದ ದೃಶ್ಯ ಕಂಡು ಬAದಿದೆ ಅಯೋಧ್ಯೆಯಲ್ಲಿ ಭಕ್ತರು ಜೈಶ್ರೀರಾಮ್ ಎಂದು ಘಷಣೆ ಕೂಗುತ್ತ ರಾಮಜಪದೊಂದಿಗೆ ದರ್ಶನ ಪಡೆಯುತ್ತಿದ್ದಾರೆ.
ರಾಮನ ದರ್ಶನಕ್ಕೆ ಬಂದಿರುವ ಸಾಧು-ಸಂತರ, ರಾಮನ ಭಕ್ತರು ರಾಮ,ಆಂಜನೇಯನ ವೇಷ ಭೂಷಣಗಳನ್ನು ತೊಟ್ಟು ಅಯೋಧ್ಯೆ ನಗರಿಯಲ್ಲಿ ನೃತ್ಯ ಮಾಡಿದ್ದು ಗಮನ ಸೆಳೆಯಿತು. ತಂಡೋಪತAಡವಾಗಿ ಮರ್ಯಾದ ಪುರುಷನ ದರ್ಶನ ಪಡೆದ ಸಂತಸದಲ್ಲಿ ರಾಮ ಭಕ್ತರು ಮಿಂದೇಳುತ್ತಿದ್ದಾರೆ. ನಿನ್ನೆ ಅಯೋಧ್ಯೆಯಲ್ಲಿ ನಡೆದ ವೈಭವೋಪೇತ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರಂದ್ರಮೋದಿ ಅವರು ರಾಮಲಲ್ಲಾ ಪ್ರತಿಷ್ಠಾಪನೆ ನೆರವೇರಿಸಿದ್ದರು.
ಗಣ್ಯಾತಿಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿAದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿಲಾಗಿತ್ತು. ಇಂದು ರಾಮನ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ರಾಮಭಕ್ತರು ಅಯೋಧ್ಯೆಗೆ ಆಗಮಿಸಿದ್ದು, ಇಂದೂ ಕೂಡ ರಾಮನೂರು ಸಂಪೂರ್ಣ ಕೇಸರಿಮಯದವಾಗಿ ಕಂಗೊಳಿಸುತ್ತಿದೆ.
ನಿನ್ನೆ ತಡರಾತ್ರಿಯಿಂದಲೇ ರಾಮನ ದರ್ಶನಕ್ಕಾಗಿ ಭಕ್ತಸಮೂಹ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ. ಕೊರೆವ ಚಳಿ ಮಂಜು ಬೀಳುತ್ತಿದ್ದರೂ ರಾಮನ ದರ್ಶನ ಪಡೆಯಲು ಕಾತುರರಾಗಿದ್ದಾರೆ. ಕೆಲವೆಡೆ ನೂಕು ನುಗ್ಗಲು ಉಂಟಾಗಿದೆ. ಇಂದು ಬೆಳಿಗ್ಗೆಯಿAದಲೇ ರಾಮಜಪಮಾಡುತ್ತ ದೇವಾಲಯದೊಳಗೆ ಭಕ್ತರು ಪ್ರವೇಶಿಸಿದರು. ಇದರೊಂದಗೆ ದೇಶಾದ್ಯAತ ಭಕ್ತರನ್ನು ಒಟ್ಟುಗೂಡಿಸುವ ಪ್ರಕ್ರಿಯೆ ಮುಂದುವರೆದಿದೆ.
ಅಯೋಧ್ಯೆಯ ಸ್ಥಳೀಯ ನಿವಾಸಿಗಳು ಬಾಲರಾಮನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ರಾಮಪಥಧಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಕಾಲಿಡಲು ಜಾಗವಿಲ್ಲದಷ್ಟು ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಕೈ ಗೊಳ್ಳಲಾಗಿದೆ.
ದೇವಾಲಯವು ಭಕ್ತರಿಗೆ ಬೆಳಗ್ಗೆ 7.00 ಕ್ಕೆ ಬಾಗಿಲು ತೆರೆಯುತ್ತದೆ ಮತ್ತು 11.30 ರವರೆಗೆ ಪ್ರವೇಶಿಸಬಹುದಾಗಿದೆ. ಮಧ್ಯಾಹ್ನ 2 ರಿಂದ 7ರವರೆಗೆ ಪ್ರವೇಶಕ್ಕೆ ಅವಕಾಶವಿರಲಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ದೇವಾಲಯದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ, ಶ್ರೀರಾಮನಿಗೆ ಪ್ರತಿ ಗಂಟೆಗೆ ಹಣ್ಣುಗಳು ಮತ್ತು ಹಾಲು ನೀಡಲಾಗುತ್ತದೆ.
ಪ್ರಾಣ ಪ್ರತಿಷ್ಠಾ ವಿಧಿ ವಿಧಾನಗಳ ನಂತರ ನಡೆದ ರಾಮಲಲ್ಲಾ ಮೂರ್ತಿಯ ಅನಾವರಣ ಸಮಾರಂಭದ ವಿಶೇಷವಾಗಿತ್ತು. ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಶ್ರೀ ರಾಮ ಜನ್ಮಭೂಮಿ ಮಂದಿರವು ಭವ್ಯವಾದ ರಚನೆಯಾಗಿ ನಿಂತಿದೆ. ಇದು 380 ಅಡಿ ಉದ್ದ (ಪೂರ್ವ-ಪಶ್ಚಿಮ) ಮತ್ತು 250 ಅಡಿ ಅಗಲವನ್ನು ಹೊಂದಿದೆ. ನೆಲದಿಂದ 161 ಅಡಿ ಎತ್ತರದಲ್ಲಿರುವ ಈ ದೇವಾಲಯವು 392 ಕಂಬಗಳಿಂದ ಬೆಂಬಲಿತವಾಗಿದೆ ಮತ್ತು 44 ಬಾಗಿಲುಗಳನ್ನು ಹೊಂದಿದೆ.
ರಾಮಲಲ್ಲಾ ಉದ್ಘಾಟನೆಗೆ 2 ವಾರಗಳಿಗೆ ಮುನ್ನ ಅಯೋಧ್ಯೆಯಲ್ಲಿನ ಹೋಟೆಲ್‌ಗಳು ಶೇ. 70 ರಷ್ಟು ಭರ್ತಿಯಾಗಿವೆ. ಹೋಟೆಲ್‌ನಲ್ಲಿ ಒಂದು ದಿನಕ್ಕಾಗಿ ಕೋಣೆ ಪಡೆಯುವ ದರ ೫ ಪಟ್ಟು ಹೆಚ್ಚಾಗಿದೆ. ಅದರಲ್ಲೂ ಐಷಾರಾಮಿ ಕೊಠಡಿಗಳ ಬಾಡಿಗೆ 1 ಲಕ್ಷ ರೂ.ಗೆ ತಲುಪಿದೆ. ಹೋಟೆಲ್ ದರ ಗಗನಕ್ಕೇರಿದ್ದರೂ ಅದನ್ನು ಲೆಕ್ಕಿಸದೆ ಭಕ್ತರು ಅಯೋಧ್ಯೆಯತ್ತ ಮುಖ ಮಾಡಿದ್ದಾರೆ. ಈಗ ಅಯೋಧ್ಯೆಯಲ್ಲಿರಾಮ ಭಕ್ತರದಿಂದ ತುAಬಿತುಳುಕುತ್ತಿದ್ದು, ಮುಂಬರುವ ದಿನಗಳಲ್ಲಿ ಪ್ರವಾಸೋದ್ಯಮಕ್ಕೆ ವೇದಿಕೆಯಾಗಲಿದ್ದು, ಉತ್ತರ ಪ್ರದೇಶ ಸರ್ಕಾರಕ್ಕೆ ಹಣದ ಹೊಳೆಯೇ ಹರಿದು ಬರಲಿದೆ.
ಭಕ್ತರ ಉತ್ಸಾಹ ಮುಗಿಲು ಮುಟ್ಟಿತ್ತು. ರಾಮಮಂದಿರ ಉದ್ಘಾಟನೆಯ ನಂತರ ಜನರ ಮನದಲ್ಲಿ ಭಕ್ತಿಯ ಮಹಾಪೂರವೇ ಹರಿದಿದೆ. ರಾಮ ಮಂದಿರದ ಮುಖ್ಯ ದ್ವಾರ ತೆರೆಯುತ್ತಿದ್ದಂತೆಯೇ ಭಕ್ತರ ದಂಡು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಿದ್ದು, ರಾಮಲಲ್ಲಾ ದರ್ಶನ ಹಾಗೂ ದೇಗುಲದಲ್ಲಿ ಪೂಜೆ ಸಲ್ಲಿಸಲು ಉತ್ಸುಕರಾಗಿದ್ದರು.


