ಅಯೋಧ್ಯೆ : ಇಂದು ಹಿಂದುಗಳಿಗೆ ಅತ್ಯಂತ ಮಹತ್ವದ ದಿನ. ಶತಕೋಟಿ ಭಾರತೀಯರ ಕನಸು ಸಕಾರಗೊಳ್ಳುವ ಸುದಿನನ. ಹೌದು ಕೌಸಲ್ಯಸುಪ್ರಜ ಬಾಲ ರಾಮನಿಗೆ ಪ್ರಾಣಪ್ರತಿಷ್ಠಾಪಣೆ ನಡೆಯಲಿದ್ದು, ಎಲ್ಲೆಲ್ಲೂ ರಾಮಘೋಷ ಮೊಳಗಿದೆ. ಭಕ್ತಿಸಾಗರದಲ್ಲಿ ಅಯೋಧ್ಯೆಮಿಂದೇಳುತ್ತಿದೆ.380 ಅಡಿ ಉದ್ದ, 250 ಅಡಿ ಅಗಲ. ಮೂರು ಮಹಡಿಗಳ ಬೃಹತ್ ಭವ್ಯ ಮಂದಿರ ನಾಗರ ಶೈಲಿಯಲ್ಲಿ ವಿನ್ಯಾಸಗೊಂಡಿದ್ದು, 51 ಇಂಚು ಎತ್ತರದ ರಾಮಲಲ್ಲಾನ ಮೂರ್ತಿ ಭವ್ಯ ಮಂದಿರದಲ್ಲಿ ವಿರಾಜಮಾನವಾಗಲಿದೆ. ರಾಮಮಂದಿರದಲ್ಲಿ ಬೆಳಗ್ಗೆ 6.30ರಿಂದಲೇ ಧಾರ್ಮಿಕ ವಿಧಿವಿಧಾನಗಳು ಶುರುವಾಗಲಿವೆ. ಬೆಳಗ್ಗೆ 6.30ಕ್ಕೆ ರಾಮಲಲ್ಲಾ ಮೂರ್ತಿಗೆ(ಶೃಂಗಾರ ಮಾಡಿ ಜಾಗರಣ ಆರತಿ ಬೆಳಗಲಾಗುತ್ತದೆ. ಇನ್ನು 7 ಗಂಟೆಯಿಂದಲೇ ರಾಮನ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ರಾಮಮಂದಿರ ಟ್ರಸ್ಟ್ ನೀಡಿರುವ ಪಾಸ್‌ಗಳ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಭಕ್ತರು ದೇವಾಲಯ ಪ್ರವೇಶಿಸಿ ಬೆಳಗ್ಗೆ 7 ಗಂಟೆಯಿಂದ 11.30ರವರೆಗೆ ರಾಮನ ದರ್ಶನ ಪಡೆಯಬಹುದಾಗಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆರತಿ ನಡೆಯಲಿದೆ.
ಬೆಳಗ್ಗೆ 11ಗಂಟೆಯಿಂದ 12ರವರೆಗೆ ರಾಮ ಮಂದಿರ ವೀಕ್ಷಣೆ, ರಾಮಜನ್ಮಭೂಮಿ ಆವರಣದಲ್ಲಿ ಪ್ರಧಾನಿ ಮೋದಿ ಸಂಚರಿಸಲಿದ್ದಾರೆ. ನಂತರ ಮಧ್ಯಾಹ್ನ 12.05ರಿಂದ 12.55ರವರೆಗೆ ಬಾಲರಾಮನಿಗೆ ಪ್ರಾಣಪ್ರತಿಷ್ಠಾಪನೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 12:20 ಕ್ಕೆ ಬಾಲರಾಮನ ಕಣ್ಣಿಗೆ ಕಟ್ಟಿರುವ ಬಟ್ಟೆ ತೆಗೆಯಲಿದ್ದಾರೆ. ಕಣ್ಣಿಗೆ ಕಟ್ಟಿರುವ ಬಟ್ಟೆ ತೆರೆದ ಬಳಿಕ ಕಣ್ಣಿಗೆ ಕಾಡಿಗೆಯನ್ನು ಹಚ್ಚಲಿದ್ದಾರೆ.
ರಾಮಲಲ್ಲಾನ ಕಣ್ಣಿಗೆ ಕಾಡಿಗೆಯನ್ನು ಹಚ್ಚಿದ ಬಳಿಕ ಮಧ್ಯಾಹ್ನ 12.25ಕ್ಕೆ ರಾಮಲಲ್ಲಾನಿಗೆ ಕನ್ನಡಿಯನ್ನು ತೋರಿಸಲಿದ್ದಾರೆ. ಬಾಲರಾಮನಿಗೆ ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಪ್ರಧಾನಿ ಮೋದಿ ಮಧ್ಯಾಹ್ನ 12.55ಕ್ಕೆ ಹೆಲಿಕಾಪ್ಟರ್‌ನಿಂದ ರಾಮಮಂದಿರದ ಮೇಲೆ ಪುಷ್ಪವೃಷ್ಟಿಯನ್ನು ಮಾಡಲಿದ್ದಾರೆ. ಮೋದಿ ಅವರು ಪ್ರಭು ರಾಮನ ಮೊದಲ ದರ್ಶನ ಪಡೆದ ನಂತರ, ಮಧ್ಯಾಹ್ನ 1 ಗಂಟೆಯಿಂದ ಇತರ ಭಕ್ತರಿಗೆ ಅವಕಾಶ ದೊರೆಯಲಿದೆ. ಅಯೋಧ್ಯೆ ಕೇಸರಿ ಮಯವಾಗಿದೆ. ರಾಮಮಂದಿರ ಎದುರು ಭಕ್ತರು ಜಮಾಯಿಸಿದ್ದಾರೆ. ಕಲಾ ತಂಡಗಳು ನೃತ್ಯ ಪ್ರದರ್ಶಿಸಿ ರಾಮನನ್ನು ಭಜಿಸುತ್ತಿವೆ.
ಅಯೋಧ್ಯೆಯಲ್ಲಿ ಇಂದು ನಡೆಯಲಿರುವ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್ಕೆ ಅಡ್ವಾಣಿ(LK Advani) ಪಾಲ್ಗೊಳ್ಳುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಶೀತ ವಾತಾವರಣವಿರುವ ಕಾರಣ 96 ವರ್ಷದ ನಾಯಕ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಹಿರಿಯ ನಾಯಕರ ಆರೋಗ್ಯ ಮತ್ತು ವಯಸ್ಸಿನ ಕಾರಣದಿಂದ ಈ ಮಹಾ ಕಾರ್ಯಕ್ರಮಕ್ಕೆ ಹಾಜರಾಗದಂತೆ ಈ ಹಿಂದೆ ವಿನಂತಿಸಲಾಗಿತ್ತು.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ದೇಶದೆಲ್ಲೆಡೆ ಸಂಭ್ರಮ ಸಡಗರ ಮನೆ ಮಾಡಿದೆ. ಆದರೆ ರಾಜ್ಯದಲ್ಲಿ ಸಾಕಷ್ಟು ನಿರ್ಬಂಧ ವಿಧಿಸಲಾಗಿದೆ. ರಾಜ್ಯದಲ್ಲಿ ಮೆರವಣಿಗೆ ಮಾಡುವಂತಿಲ್ಲ, ಶೋಭಾ ಯಾತ್ರೆ ನಡೆಸುವಂತಿಲ್ಲ. ಇದ್ದಲ್ಲಿಯೇ ಪೂಜೆ ನೆರವೇರಿಸಿ ಎಂದು ಸರ್ಕಾರ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದೆ. ಬಹುತೇಕ ರಾಜ್ಯಗಳಲ್ಲಿ ಸೋಮವಾರ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿಯೂ ರಜೆ ಘೋಷಿಸಬೇಕೆಂದು ಬಿಜೆಪಿ ನಾಯಕರು ಹಾಗೂ ಅನೇಕ ಸಂಘ ಸಂಸ್ಥೆಗಳು ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು.ಆದರೆ, ಯಾವುದೇ ಕಾರಣಕ್ಕೂ ರಜೆ ನೀಡುವುದಿಲ್ಲಎಂಬ ಹೇಳಿಕೆ ಜನರಿಗೆ ಬೇಸರ ತರಿಸಿದೆ.
ಶೋಭಾಯಾತ್ರೆ ಘರ್ಷಣೆ: ಮೈಸೂರಿನಲ್ಲಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಬೈಕ್ರ‍್ಯಾಲಿಗೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ಬೃಹತ್ ಅಗರಬತ್ತಿ ಹಚ್ಚುವ ಬಹಿರಂಗ ಕಾರ್ಯಕ್ರಮಕ್ಕೂ ತಡೆಯೊಡ್ಡಿದ್ದಾರೆ.
ಕೊಪ್ಪಳದಲ್ಲಿ ಶ್ರೀರಾಮನ ಶೋಭಾಯಾತ್ರೆಗೆ ತಡೆಯಲು ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಭಕ್ತರ ನಡುವೆ ಘರ್ಷಣೆ ನಡೆದಿದೆ.


