Friday, March 13, 2026
Flats for sale
Homeದೇಶಅಯೋಧ್ಯೆ : ಅಯೋಧ್ಯೆಗೆ ರಾಮ ಲಲ್ಲಾ ಮೂರ್ತಿ ಆಗಮನ.

ಅಯೋಧ್ಯೆ : ಅಯೋಧ್ಯೆಗೆ ರಾಮ ಲಲ್ಲಾ ಮೂರ್ತಿ ಆಗಮನ.

ಅಯೋಧ್ಯೆ : ದೇಶದಲ್ಲಿ ಜನರು ಕಾಯುತ್ತಿರುವ ರಾಮಜನ್ಮಭೂಮಿ ಉದ್ಘಾಟನೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ , ಹಿಂದೂ ಸಂಘಟನೆಗಳ ಹೋರಾಟ ಹಾಗೂ ಲಕ್ಷಾಂತರ ಕರಸೇವಕರ ಬಲಿದಾನದ ಪ್ರತೀಕ ಈ ಅಯೋಧ್ಯೆಯಾಗಿದೆ. ಜನವರಿ 22 ರಂದು ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗಲಿದ್ದು, ಇದಕ್ಕಾಗಿ ವಿವಿಧ ಕೈಂಕರ್ಯಗಳು ಜನವರಿ 16ರ ಬೆಳಗ್ಗೆಯಿಂದಲೇ ಆರಂಭವಾಗಿವೆ. ಈಗ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹ ಅಯೋಧ್ಯೆ ತಲುಪಿದೆ.

ಅಯೋಧ್ಯೆಯಲ್ಲಿ ಇಂದು ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಸ್ಥಳದಿಂದ ರಾಮಂದಿರ ನಿರ್ಮಾಣದ ಆವರಣಕ್ಕೆ ಮೆರವಣಿಗೆ ಮೂಲಕ ಸಾಗಿಸಲಾಗಿದೆ. ನಾಳೆ ಗರ್ಭಗುಡಿಯಲ್ಲಿ ಗೊತ್ತುಪಡಿಸಿದ ಆಸನದಲ್ಲಿ ರಾಮಲಲ್ಲಾ ಪ್ರತಿಮೆಯನ್ನು ಸ್ಥಾಪಿಸಲಾಗುತ್ತೆ.51 ಇಂಚು ಎತ್ತರದ ಮೂರ್ತಿ ಇದಾಗಿದ್ದು, ಒಟ್ಟು ಮೂರ್ತಿಯ ಗ್ರಾತ್ರ 8 ಅಡಿ ಎತ್ತರ ಹಾಗೂ ಮೂರು ಅಡಿ ಅಗಲ ಇದೆ. ಇದರಲ್ಲಿ ಪ್ರಭಾವಳಿಯೂ ಒಳಗೊಂಡಿದೆ.51 ಇಂಚಿನ ಕಲ್ಲಿನ ವಿಗ್ರಹದಲ್ಲಿ ಶ್ರೀ ರಾಮನ ಬಾಲ್ಯದ ಸ್ವರೂಪ, ಶ್ರೀ ರಾಮನ ಮುಗ್ದತೆ, ತುಂಟತನದ ಜೊತೆಗೆ ಗಾಂಭೀರ್ಯತೆ ಸಹ ಇದೆ.ಧಾರವಾಹಿಗಳಲ್ಲಿ, ಸಿನಿಮಾಗಳಲ್ಲಿ, ಪುಸ್ತಕದ ಪುಟಗಳಲ್ಲಿ ಎಲ್ಲೂ ಸಹಾ ರಾಮಲಲ್ಲಾನನ್ನು ಯಾರು ನೋಡಿಲ್ಲ. ಇದೀಗ ವಿಗ್ರಹದ ಅಧಿಕೃತ ಫೋಟೋ ಬಹಿರಂಗವಾಗಿದೆ.

ಈ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಜನವರಿ 22ರಂದು ಅನಾವರಣಗೊಳಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular