Sunday, March 15, 2026
Flats for sale
Homeರಾಜ್ಯಗಂಗಾವತಿ : ಕಲಿಕೇರಿಯಲ್ಲಿ 12ನೇ ಶತಮಾನದ ಎರಡು ಶಿಲಾ ಶಾಸನ ಪತ್ತೆ.

ಗಂಗಾವತಿ : ಕಲಿಕೇರಿಯಲ್ಲಿ 12ನೇ ಶತಮಾನದ ಎರಡು ಶಿಲಾ ಶಾಸನ ಪತ್ತೆ.

ಗಂಗಾವತಿ : ಕನಕಗಿರಿ ತಾಲ್ಲೂಕಿನ ಕಲಿಕೇರಿ ಗ್ರಾಮದಲ್ಲಿ ವಸ್ತು ಸಂಗ್ರಾಹಲಯ ನಿಮರ್ಾಣಕ್ಕೆಂದು ಸ್ಥಳ ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲಿ 12ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲಕ್ಕೆ ಸೇರಿದ್ದು ಎನ್ನಲಾದ ಎರಡು ಶಿಲಾ ಶಾಸನಗಳು ಪತ್ತೆಯಾಗಿವೆ.

ಹಂಪೆ-ಕಮಲಾಪುರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿದರ್ೇಶಕ ಡಾ.ಆರ್.ಶೇಜೇಶ್ವರ ನೇತೃತ್ವದಲ್ಲಿ ಮ್ಯೂಸಿಯಂ ನಿಮರ್ಾಣಕ್ಕೆಂದು ಕಲಿಕೇರಿ ಗ್ರಾಮದಲ್ಲಿ ಸ್ಥಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಈ ಶಿಲಾಶಾಸನ ಪತ್ತೆಯಾಗಿವೆ.

ಗ್ರಾಮದ ಜೋಷಿ ಎಂಬುವರ ಜಮೀನಿನಲ್ಲಿರುವ ದೇವಾಲಯದಲ್ಲಿ ಅಸಂರಕ್ಷಿತ ಒಂದು ಶಾಸನ ಮತ್ತು ಗ್ರಾಮದ ರೈತ ತಳವಾರ ರಾಮಣ್ಣ ಎಂಬುವವರಿಗೆ ಸೇರಿದ್ದ ಜಮೀನಿನಲ್ಲಿ ಮತ್ತೊಂದು ಶಿಲಾ ಶಾಸನ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಗೋವು ಕೊಂದ ಪಾಪಕ್ಕೆ:
ಈ ಬಗ್ಗೆ ಮಾತನಾಡಿದ ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ದೇವಾಲಯದಲ್ಲಿ ಅಸಂರಕ್ಷಿತವಾಗಿ ಬಿದ್ದಿದ್ದ ಒಂದು ಕಲ್ಲಿನ ಶಾಸನ ಅಪ್ರಕಟಿತವಾಗಿದೆ. ಇದು 35 ಸೆಂ.ಮೀ. ಉದ್ದ, 55 ಸೆಂ.ಮೀ. ಅಗಲವಾಗಿದೆ. ಈ ಶಾಸನವು ಹಳೆಗನ್ನಡದಲ್ಲಿದ್ದು, ಏಳು ಸಾಲುಗಳಿಂದ ಕೂಡಿದೆ. ಶಾಸನವು ಕಲ್ಯಾಣ ಚಾಲುಕ್ಯರ ಎರಡನೇ ಜಯಸಿಂಹನ ಕಾಲಾವಧಿಯದಾಗಿರಬಹುದು ಎಂದು ಊಹಿಸಲಾಗಿದೆ.

ಕ್ರಿ.ಶ. 1015 ರಿಂದ 1042ರ ಅವಧಿಯ ಕ್ರಿ.ಶ. 11 ನೇ ಶತಮಾನದ ಶಾಸನವಾಗಿದ್ದು, ಎರಡನೇ ಜಯಸಿಂಹನು ಹತ್ತು ಮತ್ತು ಐದು ಮತ್ತರು ಭೂಮಿಯನ್ನು ದಾನ ನೀಡಿದ್ದು, `ಈ ಶಾಸನವನ್ನು ಹಾಳು ಮಾಡಿದಲ್ಲಿ ಗೋವುಗಳನ್ನು ಕೊಂದ ಪಾಪಕ್ಕೆ ಹೋಗುವರು’ ಎಂದು ಉಲ್ಲೇಖಿಸಲಾಗಿದೆ ಎಂದರು.

ದೇಗುಲಕ್ಕೆ ದಾನ:
ಎರಡನೇ ಶಾಸನವು ತಳವಾರ ರಾಮಣ್ಣನ ಜಮೀನಿನಲ್ಲಿ ಸಿಕ್ಕಿದ್ದು, ಶಿಲಾಶಾಸನದ ಮೇಲ್ಬಾಗ ತುಂಡಾಗಿದೆ. ಈ ಶಾಸನವು ಕ್ರಿ.ಶ 11-12 ನೇ ಶತಮಾನದ ಕಾಲದ್ದಾಗಿರಬಹುದು ಎಂದು ಊಹಿಸಲಾಗಿದೆ. ಶಾಸನದಲ್ಲಿ ಒಟ್ಟು ಒಂಭತ್ತು ಸಾಲುಗಳನ್ನು ಹೊಂದಿದೆ.

ಈ ಶಾಸನದಲ್ಲಿ ಮಾಳೇಶ್ವರ ದೇವರಿಗೆ ಒಂದು ಗಾಣ ಆರು ಮತ್ತು ಎರಡು ಮತ್ತರು ಭೂಮಿಯನ್ನು ದಾನ ನೀಡಲಾಗಿದೆ. ಎರಡು ಶಾಸನಗಳು ಅಪ್ರಕಟಿತ ಶಾಸನಗಳಾಗಿದ್ದು ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಾಗಿವೆ ಎಂದರು.

ಬಳಿಕ ಗ್ರಾಮದ ಹಲವೆಡೆ ಸಂಚರಿಸಿ ಅಲ್ಲಲ್ಲಿ ಪಾಳು ಬಿದ್ದಿದ್ದ ಕೆಲ ಶಾಸನಗಳನ್ನು ಗಮನಿಸಿ ಅವುಗಳನ್ನು ಛಾಯಾಚಿತ್ರಗಳನ್ನು ಪಡೆದುಕೊಂಡು ಸಂಶೋಧನೆ ನಡೆಸಿದರು. ಈ ಸಂದರ್ಭದಲ್ಲಿ ಕನಕಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯನಿವರ್ಾಹಕ ಅಧಿಕಾರಿ ಚಂದ್ರಶೇಖರ್ ಬಿ ಕಂದಕೂರ್, ಪುರಾತತ್ವ ಸಹಾಯಕ ಡಾ.ಆರ್.ಮಂಜನಾಯ್ಕ ಇತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular