ಹುಬ್ಬಳ್ಳಿ : ಶಕ್ತಿ ಯೋಜನೆಯಡಿ ಮಹಿಳೆಯರು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಹೀಗಿದ್ದಾಗಲೂ ಇಬ್ಬರು ಮಹಿಳೆಯರು ಮೋಸ ಮಾಡಿ ಪ್ರಯಾಣ ಮಾಡಲು ಮುಂದಾಗಿ ಸಿಕ್ಕಿಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹೌದು, ಹುಬ್ಬಳ್ಳಿಯ ನೇಕಾರ ನಗರದಿಂದ ಕಿಮ್ಸ್ ಕಡೆಗೆ ಹೋಗುವ ಬಸ್ನಲ್ಲಿ ಬುರ್ಖಾ ಹಾಕಿರುವ ಇಬ್ಬರು ಮುಸ್ಲಿಂ ಮಹಿಳೆಯರು ಒಂದೇ ಆಧಾರ್ ಕಾರ್ಡ್ನ ಎರಡು ಪ್ರತಿಗಳನ್ನು ತೋರಿಸಿ ಪ್ರಯಾಣಿಸುತ್ತಿದ್ದಾಗ ನಿರ್ವಾಹಕನ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೇಗೂ ಸರಕಾರ ಬಂದು ಬಿಟ್ಟಿ ಭಾಗ್ಯಕೊಡುವಾಗ ಈ ಪ್ರಯಾಣಿಕರಿಗೆ ADHAR ಕಾರ್ಡ್ ಪ್ರತಿ ತರಲು ಏನು ಬಂದಿದೆ ದೊಡ್ಡ ರೋಗ ವೆಂದು ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


