ನವದೆಹಲಿ : ಉದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಮತ್ತೋರ್ವ ಉದ್ಯಮಿ ಹೀರಾನಂದಾನಿಯಿAದ ಕೋಟ್ಯAತರ ರೂ. ಲಂಚ ಪಡೆದ ಪ್ರಕರಣದಲ್ಲಿ ಟಿಎಂಸಿ ಸದಸ್ಯೆ ಮಹುವಾ ಮೊಯಿತ್ರಾರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿದೆ.
ಮಹುವಾ ಪ್ರಕರಣದ ಬಗ್ಗೆ ಸಂಸತ್ತಿನ ನೀತಿ ನಿಯಮ ಸಮಿತಿಯ ತನಿಖಾ ವರದಿಯ ಶಿಫಾರಸಿನ ಮೇರೆಗೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಪ್ರತಿಪಕ್ಷಗಳ ವಿರೋಧ ಮತ್ತು ಸಭಾತ್ಯಾಗದ ನಡುವೆ ಶುಕ್ರವಾರ ಸದನದಲ್ಲಿ ಉಚ್ಚಾಟನೆಯ ನಿರ್ಧಾರ ಪ್ರಕಟಿಸಿದರು.
ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇಂಡಿಯಾ ಒಕ್ಕೂಟದ ಸದಸ್ಯರು ಸಂಸತ್ತಿನ ಹೊರಗೆ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಮೊಯಿತ್ರಾ ವಿರುದ್ಧ ಆರೋಪವೇನು..?
ಸಂಸತ್ತಿನಲ್ಲಿ ಉದ್ಯಮಿ ಅದಾನಿ ಮತ್ತು ಮೋದಿ ಸರ್ಕಾರಕ್ಕೆ ಮುಜುಗರ ಉಂಟುಮಾಡುವ ರೀತಿ ಪ್ರಶ್ನೆ ಕೇಳಲು ಮಹುವಾ ಮೊಯಿತ್ರಾ ಉದ್ಯಮಿ ದರ್ಶನ್ ಹೀರಾನಂದಾನಿಯಿAದ೨ ಕೋಟಿ ರೂ. ನಗದು ಮತ್ತು ಬೆಲೆಬಾಳುವ ಉಡುಗೊರೆ ಪಡೆದಿದ್ದಾರೆ. ಪ್ರಶ್ನೆಗಳನ್ನು ತಮಗೆ ಕಳುಹಿಸಲು ಮಹುವಾ ತಮ್ಮ ಲೋಕಸಭೆಯ ಅಧಿಕೃತ ಖಾತೆಯ ಪಾಸ್ವರ್ಡ್ ಹಿರಾನಂದನಿಗೆ ಕೊಟ್ಟಿದ್ದರು. ದುಬೈ , ಬೆಂಗಳೂರು ಸೇರಿದAತೆ ಹಲವು ಸ್ಥಳಗಳಿಂದ ಮಹುವಾ ಖಾತೆಗೆ ಉದ್ಯಮಿ ಕಡೆಯಿಂದ ನೇರವಾಗಿ ಮಾಹಿತಿ ಪಡೆದು ಲೋಕಸಭೆಯಲ್ಲಿ ಟಿಎಂಸಿ ಸಂಸದೆ ಪ್ರಶ್ನೆ ಕೇಳಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಹುವಾ ದುಬೈಗೂ ಭೇಟಿ ನೀಡಿದ್ದರು ಎಂದು ಆರೋಪಿಸಲಾಗಿದೆ.
ಬಿಜೆಪಿ ಸಂಸದ ನಿಶಿಕಾಂತ ದುಬೆ ಮೊಯಿತ್ರಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲೋಕಸಭಾಧ್ಯಕ್ಷರಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ನೀತಿ ನಿಯಮ ಸಮಿತಿ ಮೊಯಿತ್ರಾ, ಆಕೆಯ ಮಾಜಿ ಮಿತ್ರ, ವಕೀಲ ಜೈ ಅನಂತ್ ದೇಹದ್ರಾಯ್, ದುಬೆ ಅವರನ್ನು ವಿಚಾರಣೆಗೆ ಒಳಪಡಿಸಿ ೫೦೦ ಪುಟಗಳ ವರದಿ ಸಿದ್ಧಪಡಿಸಿತು. ನಿಯಮಗಳಿಗೆ ವಿರುದ್ಧವಾಗಿ ಟಿಎಂಸಿ ಸAಸದೆ ತನ್ನ ಲಾಗಿನ್ ವಿವರಗಳನ್ನು ಹೊರಗಿನ ವ್ಯಕ್ತಿಗಳಿಗೆ ನೀಡಿದ್ದಾರೆ.
ವಿಚಾರಣೆ ವೇಳೆ ಸಮಿತಿ ಸದಸ್ಯರ ವಿರುದ್ಧ ಕೆಟ್ಟದ್ದಾಗಿ ವರ್ತಿಸಿ ಮಧ್ಯದಲ್ಲೇ ಹೊರನಡೆದಿದ್ದಾರೆ. ವಿಚಾರಣೆಯಲ್ಲಿ ಸಹಕಾರ ನೀಡದೆ ಅನುಚಿತವಾಗಿ ವರ್ತಿಸಿದ್ದರಿಂದ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಬೇಕೆಂದು ಸ್ಪೀಕರ್ಗೆ ಶಿಫಾರಸು ಮಾಡಿತ್ತು.


