Saturday, July 25, 2026
Homeರಾಜಕೀಯಹೊಸನಗರ : ಕಾಡುಕೋಣವನ್ನು ಬೇಟೆಯಾಡಿ ಮಾಂಸ ಒಯ್ದ ಖದೀಮರು !

ಹೊಸನಗರ : ಕಾಡುಕೋಣವನ್ನು ಬೇಟೆಯಾಡಿ ಮಾಂಸ ಒಯ್ದ ಖದೀಮರು !

ಹೊಸನಗರ : ತಾಲ್ಲೂಕಿನ ಸಂಪೆಕಟ್ಟೆ- ಅಡಗೋಡಿ ಹತ್ತಿರ ಬಂಡಿಗೆ ಎಂಬಲ್ಲಿ ಕಾಡುಕೋಣುವೊಂದನ್ನು ಬೇಟೆಯಾಡಿ ಮಾಂಸ ವನ್ನು ಖದಿಮರು ಒಯ್ದ ಘಟನೆ ನಡೆದಿದೆ

ಕಾಡುಕೋಣವನ್ನು ಶಿಕಾರಿ ಮಾಡಿದ ಖದಿಮರು , ಅದರ ಮಾಂಸ ತೆಗೆದುಕೊಂಡುಹೋಗಿ ಕಳೆಬರವನ್ನು ಮಾಸ್ತಿ ಕಟ್ಟೆ- ಕುಂದಾಪುರ ರಾಜ್ಯ ಹೆದ್ದಾರಿಯ ಸಮೀಪ ಬಿಸಾಡಿ ಹೋಗಿದ್ದಾರೆ.

ಕಾಡುಕೋಣದ ಎದೆ ಭಾಗ ಮತ್ತು ಮೂಳೆಯನ್ನ ರಸ್ತೆಯ ಪಕ್ಕ ಎಸೆದು ಹೋಗಲಾಗಿದ್ದು, ಸ್ಥಳಿಯರು ಇದನ್ನ ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಇನ್ನೂ ಸ್ಥಳೀಯರ ಪ್ರಕಾರ, ಇದು ಯಾರೋ ಹೊರಗಡೆಯವರು ನಡೆಸಿರುವ ಕೃತ್ಯವಿರಬಹುದು ಎಂದು ಅಂದಾಜಿಸಲಾಗಿದೆ.ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ವೈಲ್ಡ್ ಲೈಫ್ ವೈದ್ಯರು ಆಗಮಿಸಿ ಪರಿಶೀಲಿಸಿದ್ದಾರೆ.

ಘಟನೆ ಸಂಬಂಧ ನಗರ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 9ರ ಅಡಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular