Wednesday, July 22, 2026
Homeರಾಜ್ಯಹುಬ್ಬಳ್ಳಿ : ಸಿಲಿಂಡರ್ ಸ್ಫೋಟ ಪ್ರಕರಣ : ಒಂಬತ್ತು ಮಾಲಾಧಾರಿಗಳಲ್ಲಿಒಟ್ಟು ಎಂಟು ಜನ ಸಾವು..!

ಹುಬ್ಬಳ್ಳಿ : ಸಿಲಿಂಡರ್ ಸ್ಫೋಟ ಪ್ರಕರಣ : ಒಂಬತ್ತು ಮಾಲಾಧಾರಿಗಳಲ್ಲಿಒಟ್ಟು ಎಂಟು ಜನ ಸಾವು..!

ಹುಬ್ಬಳ್ಳಿ : ಇಲ್ಲಿನ ಉಣಕಲ್‌ನ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿನ ಅಡುಗೆ ಅನಿಲ (ಸಿಲಿಂಡರ್) ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ೯ ಮಾಲಾಧಾರಿಗಳಲ್ಲಿ ಏಳು ಜನ ಮಾಲಾಧಾರಿಗಳು ಮೃತಪಟ್ಟಿದ್ದು, ಮತ್ತೊಬ್ಬ ಮಾಲಾಧಾರಿ ಮಂಗಳವಾರ ಬೆಳಗಿನ ಜಾವ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಉಣಕಲ್ ಸಾಯಿನಗರದ ಪ್ರಕಾಶ ಬಾರಕೇರ(42) ಇಂದು ಮೃತಪಟ್ಟವರು. ಪ್ರಕಾಶ ಅವರು ಇಲ್ಲಿನ ಇಸ್ಕಾನ್‌ನಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದರು. ತಂದೆ-ಮಗ ಅಯ್ಯಪ್ಪ ಮಾಲೆ ಹಾಕಿದ್ದು, ಮಗ ಚಿಕಿತ್ಸೆ ಪಡೆಯುತ್ತಿದ್ದರೆ, ತಂದೆ ಅಸುನೀಗಿದ್ದಾರೆ.

ಗಾಯಗೊಂಡಿದ್ದ 9 ಮಾಲಾಧಾರಿಗಳ ಪೈಕಿ ಡಿ. 26ರಂದು ನಿಜಲಿಂಗಪ್ಪ ಬೇಪುರಿ ಹಾಗೂ ಸಂಜಯ ಸವದತ್ತಿ ಮೃತಪಟ್ಟಿದ್ದು, ಡಿ.27 ಶುಕ್ರವಾರ ಉಣಕಲ್ ನಿವಾಸಿ ರಾಜು ಮೂಗೇರ(16) ಹಾಗೂ ಸಾಯಿನಗರ ಲಿಂಗರಾಜ ಬಿರನೂರ(ಚಲವಾದಿ)(19) ಮೃತಪಟ್ಟಿದ್ದರು.

ಡಿ.29 ರಂದು ಶಂಕರ್ ಚವ್ಹಾಣ್, ಮಂಜುನಾಥ ವಾಗ್ಮೋಡೆ ಮೃತಪಟ್ಟಿದ್ದರು. ಸೋಮವಾರ ರಾತ್ರಿ ತೇಜಸ್ ಸಾಕ್ರೆ(26) ಮೃತಪಟ್ಟಿದ್ದರು. ಮೃತ ಪ್ರಕಾಶ ಅವರ ಪುತ್ರ ವಿನಾಯಕ ಬಾರಕೇರ ಗುಣಮುಖವಾಗುತ್ತಿದ್ದಾನೆ. ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಮುಂದುವರೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular