Friday, August 28, 2026
Homeರಾಜ್ಯಹಾಸನ : ಹಾಸನಾಂಬೆ ದೇವಾಲಯಕ್ಕೆ ಶೂ ಧರಿಸಿ ಬಂದ ಜಡ್ಜ್ , ಆಕ್ರೋಶಗೊಂಡು ಕಸದ ಬುಟ್ಟಿಗೆ...

ಹಾಸನ : ಹಾಸನಾಂಬೆ ದೇವಾಲಯಕ್ಕೆ ಶೂ ಧರಿಸಿ ಬಂದ ಜಡ್ಜ್ , ಆಕ್ರೋಶಗೊಂಡು ಕಸದ ಬುಟ್ಟಿಗೆ ಎಸೆದ ಪೌರಕಾರ್ಮಿಕರು ..!

ಹಾಸನ : ದೇವಿ ದರ್ಶನಕ್ಕೆ ಜಡ್ಜ್ ಶೂ ಧರಿಸಿ ಬಂದ ಘಟನೆ ಹಾಸನಾಂಬೆ ದೇವಾಲಯದಲ್ಲಿ ನಡೆದಿದೆ. ಗರ್ಭಗುಡಿ ಬಳಿ ಹೊರಗಿರುವ ಶಕ್ತಿ ಗಣಪತಿ ದೇವಾಲಯದವರೆಗೂ ಶೂ ಹಾಕಿಕೊಂಡೇ ನ್ಯಾಯಾಧೀಶರು ಬಂದಿದ್ದು ಅಲ್ಲೇ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರು ಶೂ ತೆಗೆಯುವಂತೆ ಸೂಚಿಸಿದ್ದಾರೆ. ಅದರೂ ನ್ಯಾಯಾಧೀಶರು ಶೂ ಅನ್ನು ದೇವಾಲಯದ ಹೊರಗೆ ಬಿಡಲು ನಿರಾಕರಿಸಿದ್ದು ಶಕ್ತಿ ಗಣಪತಿ ದೇವಾಲಯದ ಬಳಿ ಇಟ್ಟಿದ್ದ ಕಸದ ಬುಟ್ಟಿಯ ಬಳಿ ಬಿಟ್ಟಿದ್ದಾರೆ.

ನ್ಯಾಯಾಧೀಶರ ನಡೆಗೆ ಭಕ್ತರ ಆಕ್ರೋಶಗೊಂಡಿದ್ದು ನ್ಯಾಯಾಧೀಶರು ಅಲ್ಲಿಯೇ ಬಿಟ್ಟಿ ಹೋದ ಶೂಗಳನ್ನು ಪೌರಕಾರ್ಮಿಕರು ಕಸದ ಬುಟ್ಟಿಗೆ ಎಸೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular