Thursday, July 23, 2026
Homeರಾಜ್ಯಹಾಸನ : ಹಾಸನದಲ್ಲಿ ಎನ್ ಡಿ ಎ ಅಭ್ಯರ್ಥಿ ಗೆಲುವಿಗೆ ಶ್ರಮವಹಿಸುತ್ತೇವೆ ; ಮಾಜಿ ಶಾಸಕ...

ಹಾಸನ : ಹಾಸನದಲ್ಲಿ ಎನ್ ಡಿ ಎ ಅಭ್ಯರ್ಥಿ ಗೆಲುವಿಗೆ ಶ್ರಮವಹಿಸುತ್ತೇವೆ ; ಮಾಜಿ ಶಾಸಕ ಪ್ರೀತಂ ಗೌಡ.

ಹಾಸನ : ಹಾಸನ ಜಿಲ್ಲೆಯ ತಾಲೂಕಿನಲ್ಲಿ ಒಟ್ಟು 221 ಭೂತಗಳಿದ್ದು ನಾನು ಬಿಜೆಪಿ ಕಾರ್ಯಕರ್ತನಾಗಿ ಸಕ್ರಿಯವಾಗಿ ಭಾಗವಹಿಸುತ್ತೇನೆ ಇದರ ಜೊತೆಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯದ್ಯಂತ ಪ್ರವಾಸ ಮಾಡುವ ಸೂಚನೆಯಿದ್ದು ಒಟ್ಟರೆ ಎನ್ ಡಿ ಎ ಅಭ್ಯರ್ಥಿ ಗೆಲುವಿಗೆ ಶ್ರಮವಹಿಸುತ್ತೇವೆ ಎಂದು ಮಾಜಿ ಶಾಸಕ ಪ್ರೀತಂ ಗೌಡ ತಿಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಾಟೀಲ್ ಹೊಳೆನರಸೀಪುರಕ್ಕಿಂತ ಒಂದು ಮತ ಹೆಚ್ಚು ಪಡೆಯುವಂತೆ ನಮ್ಮ ಹೋರಾಟ ನಡೆಸುತ್ತೇವೆ ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಪಕ್ಷಕ್ಕಿಂತ ದೇಶ ಮುಖ್ಯ ಒಟ್ಟಾರೆ ಮೋದಿ ಮತ್ತೊಮ್ಮೆ ಆಗಬೇಕೆಂಬ ಒತ್ತಾಸೆ ಎಲ್ಲರೂ ಇದ್ದು ಇದಕ್ಕೆ ಪೂರಕವಾಗಿ ನಾವು ಹೋರಾಡುತ್ತೇವೆ ದೇಶದಲ್ಲಿ ಒಟ್ಟು 370 ಸ್ಥಾನ ಬಿಜೆಪಿಗೆ ಬರಬೇಕು ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ನಾವು ಸಕ್ರಿಯವಾಗಿ ಮತಯಾಚನೆ ಮಾಡುತ್ತೇವೆ ಎಂದು ಹೇಳಿದರು.

ಮೋದಿ ಮತ್ತೊಮ್ಮೆ ಘೋಷವಾಕ್ಯಗಳೊಂದಿಗೆ ಮಾತನಾಡಿದ ಅವರು ಸುದ್ದಿಗೋಷ್ಠಿಯಲ್ಲಿ ಎಲ್ಲೂ ಕೂಡ ಪ್ರಜ್ವಲ್ ಹೆಸರು ಹೇಳದೆ ಇದ್ದಿದ್ದು ಬಾರಿ ವಿಶೇಷವಾಗಿತ್ತು ರಾಷ್ಟ್ರ ಹಾಗೂ ರಾಜ್ಯ ಬಿಜೆಪಿಯ ಸೂಚನೆಯಂತೆ ನಮಿಗೆ ಪಕ್ಷ ಸಂಗತಿಸುವಂತೆ ಸೂಚನೆ ಬಂದಿದ್ದು ಇದರ ಹಿನ್ನೆಲೆಯಲ್ಲಿ ನಾವು ಪಕ್ಷ ಸಂಘಟನೆ ಮಾಡಿ ಏನ್ ಡಿ ಎ ಅಭ್ಯರ್ಥಿ ಗೆಲುವಿಗೆ ಶ್ರಮ ವಹಿಸುತ್ತೇವೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular