ಹಾವೇರಿ : ಕಳಪೆ ಮಟ್ಟದ ಆಹಾರ ಪದಾರ್ಥಗಳಿಂದ ಇಂತಹ ಸಮಸ್ಯೆ ಬರುವುದು ಸಹಜ ಆದರೆ ಶುಕ್ರವಾರ ತಾಲೂಕಿನ ಮಕರವಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮದ್ಯಾಹ್ನದ ಬಿಸಿಯೂಟ ಸೇವಿಸಿ ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ.
ಹಳ್ಳಿಗಾಡಿನ ಪ್ರದೇಶವಾದ ಮಕರವಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 8 ರಿಂದ 10 ನೇ ತರಗತಿ ವ್ಯಾಸಂಗ ಮಾಡುವ ಒಟ್ಟು 130 ವಿದ್ಯಾರ್ಥಿಗಳಿದ್ದು, ಎಂದಿನಂತೆ ಪಾಠ ಮುಗಿಸಿ ಮದ್ಯಾಹ್ನ ಅನ್ನ ಸಾಂಬರ್ ಹಾಗೂ ಶೇಂಗಾದ ಚಿಕ್ಕಿಯನ್ನು ಸೇವಿಸಿದ್ದಾರೆ ಊಟ ಮಾಡಿ ಸುಮಾರು ಎರೆಡು ಗಂಟೆಗಳ ನಂತರ ಕೆಲವು ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು ಹಾಗೂ ತಲೆನೋವು ಕಾಣಿಸಿಕೊಂಡಿದ್ದ ಹಿನ್ನಲೆ ಎಸ್‌ಡಿಎಮ್‌ಸಿ ಹಾಗೂ ಶಾಲಾ ಶಿಕ್ಷಕರು ಕೂಡಲೇ ಶೇಷಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಕ್ಕಿಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಚಿಕಿತ್ಸೆ ಒಳಪಡಿಸಿ ನಂತರ ಗುಣಮುಖರನ್ನಾಗಿಸಿ ಮನೆಗೆ ಕಳುಹಿಸಿದ್ದಾರೆ.
ಈ ಸುದ್ದಿ ತಿಳಿದ ತಕ್ಷಣ ತಾಲೂಕು ತಹಶೀಲ್ದಾರ್ ರವಿ ಕೊರವರ ಸೇರಿದಂತೆ ಸಿಪಿಐಎಸ್.ಆರ್.ಶ್ರೀಧರ್ ಜಿಲ್ಲಾ ಮತ್ತು ತಾಲೂಕು ಮಟ್ಟದ ಆರೋಗ್ಯ ,ಶಿಕ್ಷಣ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ವಿಚಾರಿಸಿದ್ದಾರೆ.


