Saturday, July 25, 2026
Homeರಾಜ್ಯಸುರಪುರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ.

ಸುರಪುರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ.

ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರ ಗ್ರಾಮದ ದೊಡ್ಡ ತಾಂಡಾದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಘಟನೆ ನಡೆದಿದೆ.

ಜಯರಾಮ ರಾಠೋಡ ಎನ್ನುವವರ ಮನೆಗೆ ಬೆಂಕಿ ಬಿದ್ದಿದ್ದು ನಂತರ ಅಡುಗೆ ಅನಿಲದ ಪೈಪ್ ಸುಟ್ಟು ಸಿಡಿದಿದೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಮನೆಯಲ್ಲಿದ್ದ 40 ಗ್ರಾಂ ಚಿನ್ನ,1 ಲಕ್ಷ 70 ಸಾವಿರ ರೂಪಾಯಿ ಸೇರಿದಂತೆ ಆಸ್ತಿ ದಾಖಲೆ ಪತ್ರಗಳು ಬಟ್ಟೆ ಬರೆ ಸೇರಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿವೆ

ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಮುನ್ನ ಎಲ್ಲವೂ ಸುಟ್ಟುಹೋಗಿದೆ.ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು ಪ್ರಕರಣ ದಾಖಲಾಗಿದೆ .

RELATED ARTICLES

LEAVE A REPLY

Please enter your comment!
Please enter your name here

Most Popular