Thursday, July 23, 2026
Homeರಾಜ್ಯಸುರಪುರ: ತಿಂಗಳಾದರು ಜಮೀನಲ್ಲಿಯ ಪಂಪ್ಸೆಟ್‌ಗೆ ಟಿ.ಸಿ ನೀಡದ ಜೆಸ್ಕಾಂ ಅಧಿಕಾರಿ, ನಡೆಗೆ ಬೇಸತ್ತು ಕಚೇರಿ ಮುಂದೆ...

ಸುರಪುರ: ತಿಂಗಳಾದರು ಜಮೀನಲ್ಲಿಯ ಪಂಪ್ಸೆಟ್‌ಗೆ ಟಿ.ಸಿ ನೀಡದ ಜೆಸ್ಕಾಂ ಅಧಿಕಾರಿ, ನಡೆಗೆ ಬೇಸತ್ತು ಕಚೇರಿ ಮುಂದೆ ಅಹೋರಾತ್ರಿ ಧರಣಿಗೆ ಕುಳಿತ ರೈತ.

ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆ. ತಳ್ಳಳ್ಳಿ ಗ್ರಾಮದ ರೈತ ನಿಂಗಣ್ಣ ಎನ್ನುವವರ ಜಮೀನಿನಲ್ಲಿಯ ಪಂಪ್ಸೆಟ್ ಟಿ.ಸಿ ಸುಟ್ಟು ಒಂದು ತಿಂಗಳಾದರೂ ರೈತನಿಗೆ ಟಿ.ಸಿ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.

ಟಿಸಿ ಸುಟ್ಟು ಹೋಗಿರುವ ಬಗ್ಗೆ 28-12-2023 ರಂದು ಗೆಸ್ಕಾಂ ಸಹಾಯವಾಣಿ 1912 ಕರೆ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಒಂದು ತಿಂಗಳಾದರೂ ಟಿಸಿ ನೀಡದೆ ಕೊಡದೆ ದಿನಾಲು ಕಚೇರಿಗೆ ಅಲೆದಾಡಿಸುತ್ತಿದ್ದಾರೆ.

ಸಧ್ಯ ರೈತನ ಲಕ್ಷಾಂತರ ರೂಪಾಯಿ ಮೌಲ್ಯದ ಪಪ್ಪಾಯಿ ಬೆಳೆ ಒಣಗುತ್ತಿದ್ದು ರೈತ ಕಂಗಾಲಾಗಿದ್ದಾನೆ..

ಕಳೆದ ನಾಲ್ಕು ದಿನಗಳಿಂದ ಅಧಿಕಾರಿಗಳು ರೈತನಿಗೆ ಸತಾಯಿಸುತ್ತಿದ್ದಾರೆ. ಗುರುವಾರ ರೈತ ಅಧಿಕಾರಿಗಳ ನಡೆಗೆ ಬೇಸತ್ತು ಸಧ್ಯ ಸುರಪುರ ನಗರದ ರಂಗಂಪೇಟೆಯಲ್ಲಿರುವ ಜೆಸ್ಕಾಂ ಇಲಾಖೆ ಉಪ ವಿಭಾಗೀಯ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular