Sunday, June 7, 2026
Flats for sale
Homeಜಿಲ್ಲೆಶಿವಮೊಗ್ಗ : ಹುಲಿಕಲ್ ಘಾಟ್ ನಲ್ಲಿ ಹೊತ್ತಿ ಉರಿದ ಶ್ರೀ ದುರ್ಗಾಂಭ ಸಂಸ್ಥೆಯ ಖಾಸಗಿ ಬಸ್...

ಶಿವಮೊಗ್ಗ : ಹುಲಿಕಲ್ ಘಾಟ್ ನಲ್ಲಿ ಹೊತ್ತಿ ಉರಿದ ಶ್ರೀ ದುರ್ಗಾಂಭ ಸಂಸ್ಥೆಯ ಖಾಸಗಿ ಬಸ್ : ಪ್ರಯಾಣಿಕರು ಪ್ರಾಣಪಾಯದಿಂದ ಪಾರು.

ಶಿವಮೊಗ್ಗ : ಶಿವಮೊಗ್ಗ-ಉಡುಪಿ ಗಡಿಯ ಹುಲಿಕಲ್ ಘಾಟಿಯ ಬಾಳೆಬರೇ ಫಾಲ್ಸ್ ಸಮೀಪ ಶ್ರೀ ದುರ್ಗಾಂಬ ಖಾಸಗಿ ಬಸ್‌ಗೆ ಶನಿವಾರ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

Oplus_131072

ಕುಂದಾಪುರದತ್ತ ತೆರಳುತ್ತಿದ್ದ ವೇಳೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಹಾಗೂ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಎಲ್ಲಾ ಪ್ರಯಾಣಿಕರನ್ನು ತಕ್ಷಣ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಬೆಂಕಿಯ ಕೆನ್ನಾಲಿಗೆಗೆ ಬಸ್ ಬಹುತೇಕ ಸುಟ್ಟು ಕರಕಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular