Saturday, July 25, 2026
Homeರಾಜ್ಯರಿಪ್ಪನ್‌ಪೇಟೆ : ದೀಪಾವಳಿ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ಗ್ರಾಮ ದೇವತೆಗಳಿಗೆ ಪೂಜೆ.

ರಿಪ್ಪನ್‌ಪೇಟೆ : ದೀಪಾವಳಿ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ಗ್ರಾಮ ದೇವತೆಗಳಿಗೆ ಪೂಜೆ.

ರಿಪ್ಪನ್‌ಪೇಟೆ : ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬ ಬಂತು ಅಂದರೇ ಸಾಕು ಕೋಳಿ, ಕುರಿ, ಹಂದಿಗಳನ್ನು ಬಲಿ ನೀಡಿ ಭಕ್ತಿಯ ಸಮರ್ಪಣೆ ಸೇವೆ ಸಲ್ಲಿಸುವುದು ಪದ್ದತಿಯಾಗಿದೆ.

ಗುರುವಾರ ಹೊಸನಗರ ತಾಲೂಕಿನ ಜಂಬಳ್ಳಿ ಕುಕ್ಕಳಲೇ ಮಾವಿನಸರ ಈಚಲುಕೊಪ್ಪ ಗ್ರಾಮದಲ್ಲಿ ಗ್ರಾಮದ ಭೂತಪ್ಪ, ದೋಣ್ಣೆ ಭೂತಪ್ಪ,ಹಾಗೂ ವಡ್ಡೆರಭೂತಪ್ಪ ದೇವರು ಸೇರಿದಂತೆ ಸುತ್ತಮುತ್ತಲಿನ ಪರಿವಾರ ಚೌಡಿ ಭೂತಪ್ಪ ಯಕ್ಷಿ ರಣ ದೇವರುಗಳಿಗೆ ವಿಶೇಷ ಪೂಜೆ ನೆರವೇರಿಸಿ ಗ್ರಾಮದ ದೇವರಿಗೆ ಹಣ್ಣು ಕಾಯಿ ಅರ್ಪಿಸಿದರು.

ದೋಣ್ಣೆ ಭೂತಪ್ಪಗೆ ಹಣ್ಣು ಕಾಯಿ ಕುರಿ ಕೋಳಿಗಳ ಬಲಿ ನೀಡಿದರು,ವಡ್ಡರಭೂತಪ್ಪನಿಗೆ ಹಣ್ಣು ಕಾಯಿಯೊಂದಿಗೆ ೧೮ ಹಂದಿಗಳ ಬಲಿ ನೀಡಿ ಭಕ್ತಿ ಸಮರ್ಪಿಸಿದರು. ದೀಪಾವಳಿ ಅಮಾವಾಸ್ಯೆಗೆ ಮುನ್ನವೇ ಗ್ರಾಮ ದೇವರುಗಳಿಗೆ ಪೂಜೆ ಸಲ್ಲಿಸುವುದು ಹಾಗೂ ಪ್ರಾಣಿಗಳನ್ನು ಬಲಿ ನೀಡುವುದು ಸಾಂಪ್ರದಾಯಕವಾಗಿ ಬಂದ ಧಾರ್ಮಿಕ ಪದ್ಧತಿಯಾಗಿದೆ.

ಮಲೆನಾಡಿ ರೈತಾಪಿ ವರ್ಗದವರ ವಿಶೇಷ ಹಬ್ಬವಾಗಿದೆ ಜಾತಿ ಭೇದಭಾವನೆಗಳಿಲ್ಲದೇ ಊರಿನವರಲ್ಲ ಸೇರಿಕೊಂಡು ಲಿಂಗಾಯ್ತಿ ಜನಾಂಗ ಮತ್ತು ಪರಿಶಿಷ್ಟವರ್ಗದವರು ಮತ್ತು ಮಡಿವಾಳ ಜನಾಂಗದವರುಗಳೇ ಗ್ರಾಮ ದೇವರುಗಳನ್ನು ಪೂಜಿಸುವ ಸಂಪ್ರದಾಯ ಪರಂಪರಾಗತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular