Sunday, April 26, 2026
Flats for sale
Homeರಾಜ್ಯಮೈಸೂರು : SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಬಾಲಕಿ ನೇಣಿಗೆ ಶರಣು.

ಮೈಸೂರು : SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಬಾಲಕಿ ನೇಣಿಗೆ ಶರಣು.

ಮೈಸೂರು : ಕಡಿಮೆ ಅಂಕ ಬಂದಿದೆ ಎಂದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಬಾಲಕಿ ನೇಣಿಗೆ ಶರಣಾದ ಘಟನೆ ನಂಜನಗೂಡಿನ ಕುರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಕುರಹಟ್ಟಿ ಗ್ರಾಮದ ಮಂಜು ರವರ ಪುತ್ರಿ ತ್ರಿಶಾಲ(16) ಅತ್ಮಹತ್ಯೆಗೆ ಶರಣಾದ ಬಾಲಕಿ.

ನಂಜನಗೂಡಿನ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿ ಇಂದು ಬಂದ ಫಲಿತಾಂಶದಲ್ಲಿ 440 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಳು ನಾನು ಪರೀಕ್ಷೆಯನ್ನು ಡಿಸ್ಟಿಂಕ್ಷನ್ ಬರುವ ಮಟ್ಟಕ್ಕೆ ಬರೆದಿದ್ದೆ ಆದರೆ ಪ್ರಥಮ ದರ್ಜೆಯಲ್ಲಿ ಪಾಸ್ ಅಗಿದ್ದೇನೆ ಎಂದು ಡೆತ್ ನೋಟ್ ಬರೆತಿತ್ತು ಮನನೊಂದಿದ್ದ ಬಾಲಕಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾಳೆ.ಬಾಲಕಿಯ ಮೃತದೇಹ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ,ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular