Sunday, July 12, 2026
Homeಸಿನಿಮಾಮೈಸೂರು : ತಮ್ಮ ಹೇಳಿಕೆಯಿಂದ ಉಂಟಾದ ವಿವಾದಕ್ಕೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕ್ಷಮೆಯಾಚಿಸಿದ ಬಾಲಿವುಡ್ ನಟ...

ಮೈಸೂರು : ತಮ್ಮ ಹೇಳಿಕೆಯಿಂದ ಉಂಟಾದ ವಿವಾದಕ್ಕೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕ್ಷಮೆಯಾಚಿಸಿದ ಬಾಲಿವುಡ್ ನಟ ರಣವೀರ್ ಸಿಂಗ್.

ಮೈಸೂರು : ರಣವೀರ್ ಸಿಂಗ್ ಅವರು ಕಾಂತಾರ ಚಿತ್ರದ ದೈವ ಪಾತ್ರಧಾರಿ ಕುರಿತ ಅವಹೇಳನ ಆರೋಪ ಪ್ರಕರಣದ ಹಿನ್ನೆಲೆ ಮಂಗಳವಾರ ಮೈಸೂರಿನ ಚಾಮುಂಡಿ ಬೆಟ್ಟ ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬೆಳಿಗ್ಗೆ ಸುಮಾರು 7.15ಕ್ಕೆ ಸಾಮಾನ್ಯ ಭಕ್ತರಂತೆ ದೇವಸ್ಥಾನಕ್ಕೆ ಆಗಮಿಸಿದ ರಣವೀರ್ ಸಿಂಗ್, ಮೊದಲು ದೇವಾಲಯದ ಮುಂಭಾಗದಲ್ಲಿರುವ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ನಂತರ ನ್ಯಾಯಾಲಯದ ನಿರ್ದೇಶನದಂತೆ ಗರ್ಭಗುಡಿ ಎದುರು ನೆಲದಲ್ಲಿ ಕುಳಿತು ತಮ್ಮ ಹೇಳಿಕೆಯಿಂದ ಉಂಟಾದ ವಿವಾದಕ್ಕೆ ಕ್ಷಮೆಯಾಚಿಸಿದರು ಎನ್ನಲಾಗಿದೆ. ಈ ಭೇಟಿ ವೇಳೆ ದೇವಾಲಯದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಭಕ್ತರು ನಟರನ್ನು ನೋಡಲು ಮುಗಿಬಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular