Thursday, July 23, 2026
Homeರಾಜ್ಯಮೈಸೂರು : ಗೃಹ ಪ್ರವೇಶದ ಊಟ ಸೇವಿಸಿ ವೃದ್ಧೆ ಸಾವು,50 ಕ್ಕೂ ಹೆಚ್ಚು ಮಂದಿ ಅಸ್ವಸ್ಥ.

ಮೈಸೂರು : ಗೃಹ ಪ್ರವೇಶದ ಊಟ ಸೇವಿಸಿ ವೃದ್ಧೆ ಸಾವು,50 ಕ್ಕೂ ಹೆಚ್ಚು ಮಂದಿ ಅಸ್ವಸ್ಥ.

ಮೈಸೂರು ; ಮೈಸೂರು ಜಿಲ್ಲೆಯ ಮಾರ್ಬಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ನಿನ್ನೆ ನಡೆದ ಮನೆಯೊಂದರ ಗೃಹ ಪ್ರವೇಶದ ಬಳಿಕ ಊಟ ಸೇವಿಸಿ ವಾಂತಿ, ಭೇದಿ ಶುರುವಾಗಿ ವೃದ್ದೆ ಸಾವನಪ್ಪಿದ ಘಟನೆ ವರದಿಯಾಗಿದೆ.

ಸುಮಾರು ಪುರುಷರು, ಮಹಿಳೆಯರು, ಮಕ್ಕಳು ಸೇರಿ 50 ಕ್ಕೂ ಹೆಚ್ಚು ಮಂದಿ ಅಸ್ವಸ್ಥ ಗೊಂಡಿದ್ದು ಅಸ್ವಸ್ಥರಿಗೆ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲವರಿಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಿದ್ದು ಅವರಲ್ಲಿ ಇಂದು ಬೆಳಗ್ಗೆ ಗೃಹ ಪ್ರವೇಶದಲ್ಲಿ ಆಹಾರ ಸೇವಿಸಿದ್ದ ವೃದ್ಧೆ ಸಾವನಪ್ಪಿದ್ದಾರೆ.

ಮೃತರನ್ನು ಶಿವಮ್ಮ (65) ಎಂದು ಗುರುತಿಸಲಾಗಿದ್ದು,ಗ್ರಾಮಕ್ಕೆ ಆರೋಗ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular