Friday, July 3, 2026
Homeಕ್ರೀಡೆಮುಂಬೈ : ‘ಗರ್ಲ್ಫ್ರೆಂಡ್ ಸಂಸ್ಕೃತಿ’ಗೆ ಬಿಸಿಸಿಐ ಬ್ರೇಕ್…?

ಮುಂಬೈ : ‘ಗರ್ಲ್ಫ್ರೆಂಡ್ ಸಂಸ್ಕೃತಿ’ಗೆ ಬಿಸಿಸಿಐ ಬ್ರೇಕ್…?

ಮುಂಬೈ : Board of Control for Cricket in India (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶಿಸ್ತು ಮತ್ತು ವೃತ್ತಿಪರತೆಯನ್ನು ಕಾಪಾಡಲು ‘ಗರ್ಲ್ಫ್ರೆಂಡ್ ಸಂಸ್ಕೃತಿ’ಗೆ ಕಡಿವಾಣ ಹಾಕಲು ಮುಂದಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಆಟಗಾರರ ಗಮನ ಕ್ರೀಡೆಯಿಂದ ಬೇರೆಡೆಗೆ ತಿರುಗದಂತೆ ನೋಡಿಕೊಳ್ಳುವುದು ಮತ್ತು ತಂಡದ ಆಂತರಿಕ ಮಾಹಿತಿಗಳು ಹೊರಗೆ ಸೋರಿಕೆಯಾಗದಂತೆ ತಡೆಯುವುದು ಈ ಕ್ರಮದ ಮುಖ್ಯ ಉದ್ದೇಶ ಎಂದು ವರದಿಗಳು ತಿಳಿಸಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಆಟಗಾರರ ಸಂಗಾತಿಗಳು ಹೆಚ್ಚು ಸಕ್ರಿಯರಾಗಿರುವ ಹಿನ್ನೆಲೆ, ತಂಡದ ತಂತ್ರಗಳು ಅನಾಯಾಸವಾಗಿ ಬಹಿರಂಗವಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಜೊತೆಗೆ, ಕೆಲವು ಸಂಗಾತಿಗಳು ಬೆಟ್ಟಿಂಗ್ ಹಾಗೂ ಜೂಜಾಟ ಸಂಬಂಧಿತ ಆಪ್‌ಗಳನ್ನು ಪ್ರಚಾರ ಮಾಡುತ್ತಿರುವುದು ಆಂಟಿ ಕರಪ್ಷನ್ ಘಟಕದ ಗಮನಕ್ಕೂ ಬಂದಿರುವುದಾಗಿ ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular