Wednesday, November 25, 2026
Homeಕ್ರೀಡೆಅಬುಧಾಬಿ : ಒಂದೇ ಪಂದ್ಯದಲ್ಲಿ ವಿಶ್ವದಾಖಲೆಗಳ ಸುನಾಮಿ – 28 ಎಸೆತಕ್ಕೆ ಶತಕ, 40ಕ್ಕೆ 150,...

ಅಬುಧಾಬಿ : ಒಂದೇ ಪಂದ್ಯದಲ್ಲಿ ವಿಶ್ವದಾಖಲೆಗಳ ಸುನಾಮಿ – 28 ಎಸೆತಕ್ಕೆ ಶತಕ, 40ಕ್ಕೆ 150, 52ಕ್ಕೆ ದ್ವಿಶತಕ,ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಕ್ರಿಕೆಟ್ ಲೋಕವೇ ಬೆರಗು..!

ಅಬುಧಾಬಿ : ಯುಎಇ ವಿರುದ್ಧದ ಪಂದ್ಯದಲ್ಲಿ ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕವೇ ಬೆರಗಾಗುವಂತೆ ಮಾಡಿದ್ದಾರೆ. ಕೇವಲ 15 ವರ್ಷ ವಯಸ್ಸಿನ ಈ ಯುವ ಆಟಗಾರ ಸಿಕ್ಸರ್‌ಗಳ ಸುರಿಮಳೆಗೈದು ಲಿಸ್ಟ್‌ ಎ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

28 ಎಸೆತಗಳಲ್ಲಿ ಶತಕ : ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿದ ವೈಭವ್, 2023ರಲ್ಲಿ ಆಸ್ಟ್ರೇಲಿಯಾದ ಜೇಕ್ ಫ್ರೇಸರ್ (29 ಎಸೆತ) ನಿರ್ಮಿಸಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

40 ಎಸೆತಗಳಲ್ಲಿ 150 ರನ್ : ಕೇವಲ 40 ಎಸೆತಗಳಲ್ಲಿ 150 ರನ್ ಪೂರೈಸಿದ ವೈಭವ್, 2025ರಲ್ಲಿ ತಾವೇ ನಿರ್ಮಿಸಿದ್ದ 59 ಎಸೆತಗಳ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ.

52 ಎಸೆತಗಳಲ್ಲಿ ದ್ವಿಶತಕ : ಕೇವಲ 52 ಎಸೆತಗಳಲ್ಲಿ 200 ರನ್ ಗಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಈ ಹಿಂದೆ 2024ರಲ್ಲಿ ನ್ಯೂಜಿಲೆಂಡ್‌ನ ಚಾಡ್ ಬೌಲ್ಸ್ 103 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಒಂದೇ ಇನ್ನಿಂಗ್ಸ್‌ನಲ್ಲಿ 28 ಸಿಕ್ಸರ್ : ಲಿಸ್ಟ್‌ ಎ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 28 ಸಿಕ್ಸರ್ ಸಿಡಿಸಿದ ವೈಭವ್, 2018ರಲ್ಲಿ ಆಸ್ಟ್ರೇಲಿಯಾದ ಡಿ’ಆರ್ಸಿ ಶಾರ್ಟ್ (23 ಸಿಕ್ಸರ್) ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

5 ಓವರ್‌ಗಳಲ್ಲಿ 100 ರನ್:
ಈ ಪಂದ್ಯದಲ್ಲಿ ಭಾರತ ತಂಡ ಕೇವಲ 5 ಓವರ್‌ಗಳಲ್ಲಿ 100 ರನ್ ಪೂರೈಸುವ ಮೂಲಕ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. 2015ರಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾ ವಿರುದ್ಧ 6.3 ಓವರ್‌ಗಳಲ್ಲಿ 100 ರನ್ ಗಳಿಸಿದ್ದ ದಾಖಲೆಯನ್ನು ಹಿಂದಿಕ್ಕಿದೆ.

15ರ ಹರೆಯದಲ್ಲೇ ವಿಶ್ವದಾಖಲೆಗಳ ಸರಮಾಲೆ ಸೃಷ್ಟಿಸಿರುವ ವೈಭವ್ ಸೂರ್ಯವಂಶಿ ಅವರ ಈ ಸ್ಫೋಟಕ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಯುವ ಪ್ರತಿಭೆಯ ಬ್ಯಾಟಿಂಗ್ ಅಬ್ಬರಕ್ಕೆ ಕ್ರಿಕೆಟ್ ಲೋಕವೇ ಫಿದಾ!

RELATED ARTICLES

LEAVE A REPLY

Please enter your comment!
Please enter your name here

Most Popular