Sunday, August 16, 2026
Homeರಾಜ್ಯಮಂಡ್ಯ : ಹಣ್ಣಿನ ಕೆತ್ತನೆ ಕಲೆಯಲ್ಲಿ ವಿಶ್ವಮಟ್ಟದ ಸಾಧನೆ ; ಪುನೀತ್. ಜೆ ಗೆ ಸರ್ಕಾರದ...

ಮಂಡ್ಯ : ಹಣ್ಣಿನ ಕೆತ್ತನೆ ಕಲೆಯಲ್ಲಿ ವಿಶ್ವಮಟ್ಟದ ಸಾಧನೆ ; ಪುನೀತ್. ಜೆ ಗೆ ಸರ್ಕಾರದ ಬೆಂಬಲದ ಭರವಸೆ.

ಮಂಡ್ಯ : ಹಣ್ಣು-ತರಕಾರಿಗಳ ಅಲಂಕಾರಿಕ ಕೆತ್ತನೆ ಕಲೆಯಲ್ಲಿ ಅಪೂರ್ವ ಸಾಧನೆ ಮೆರೆದಿರುವ ಮಂಡ್ಯ ಜಿಲ್ಲೆಯ ಯುವ ಪ್ರತಿಭೆ ಪುನೀತ್ ಜೆ ಅವರು ಇಂದು Dr. ಯಾತಿಂದ್ರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಕಲಾತ್ಮಕ ಹಣ್ಣಿನ ಕೆತ್ತನೆಯ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು.

ಜರ್ಮನಿಯಲ್ಲಿ ನಡೆದ ಪ್ರತಿಷ್ಠಿತ ‘ಕ್ಯೂಲಿನರಿ ಒಲಂಪಿಕ್ಸ್-2024’ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದು ರಾಜ್ಯದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ ಪುನೀತ್ ಜೆ ಅವರ ಸಾಧನೆಯನ್ನು ಡಾ. ಯತೀಂದ್ರ ಸಿದ್ದರಾಮಯ್ಯ ಶ್ಲಾಘಿಸಿದರು.

ಪುನೀತ್ ಅವರ ಸೃಜನಶೀಲತೆ, ಪರಿಶ್ರಮ ಹಾಗೂ ಕಲೆಯ ಮೇಲಿನ ನಿಷ್ಠೆಯನ್ನು ಮೆಚ್ಚಿದ ಅವರು, ಈ ವಿಶಿಷ್ಟ ಕಲೆಯ ಬೆಳವಣಿಗೆ ಮತ್ತು ಪ್ರೋತ್ಸಾಹಕ್ಕಾಗಿ ಸರ್ಕಾರದಿಂದ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ಹಾಗೂ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಯುವ ಪ್ರತಿಭೆಗಳ ಸಾಧನೆ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದ್ದು, ಪುನೀತ್ ಜೆ ಅವರಂತಹ ಕಲಾವಿದರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular