Sunday, July 26, 2026
Homeರಾಜ್ಯಮಂಡ್ಯ : ಯಾವುದೇ ಕಾರಣಕ್ಕೂ ಮಂಡ್ಯ ಮಣ್ಣಿನ ಋಣ, ಮಂಡ್ಯ ಮಣ್ಣಿನ ಗುಣ ಎಂದೆಂದಿಗೂ ಬಿಡಲ್ಲ:...

ಮಂಡ್ಯ : ಯಾವುದೇ ಕಾರಣಕ್ಕೂ ಮಂಡ್ಯ ಮಣ್ಣಿನ ಋಣ, ಮಂಡ್ಯ ಮಣ್ಣಿನ ಗುಣ ಎಂದೆಂದಿಗೂ ಬಿಡಲ್ಲ: ಸುಮಲತಾ ಅಂಬರೀಷ್.

ಮಂಡ್ಯ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಂದನವನಕ್ಕೆ ಕಾಲಿಟ್ಟು 25 ವರ್ಷಗಳು ತುಂಬಿದ ಹಿನ್ನೆಲೆ ಸಕ್ಕರೆನಾಡು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಅದ್ದೂರಿಯಾಗಿ ಬೆಳ್ಳಿಹಬ್ಬ ಆಚರಿಸಲಾಯಿತು. ಈ ಬಗ್ಗೆ ಮಾತನಾಡಿದ ಸುಮಲತಾ ಅಂಬರೀಷ್ ರವರು ಯಾವುದೇ ಕಾರಣಕ್ಕೂ ಮಂಡ್ಯ ಮಣ್ಣಿನ ಋಣ, ಮಂಡ್ಯ ಮಣ್ಣಿನ ಗುಣ ಎಂದೆಂದಿಗೂ ಬಿಡಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ಮಂಡ್ಯ ಲೋಕ ಸಭಾ ಅಖಾಡಕ್ಕೆ ಸುಮಲತಾ ಅಂಬರೀಶ್ ಅವರು ಇಳಿಯುತ್ತಿರುವುದು ಬಹುತೇಕ ಫಿಕ್ಸ್ ಆಗಿದೆ.

ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೂ ಕಣ್ಣಕ್ಕಿಳಿಯುವ ಸೂಚನೆ ನೀಡಿದ್ದು 2019ರ ಚುನಾವಣೆ ನೆನೆದು ಸುಮಲತಾ ಅವರು ಭಾವುಕರಾದರು.ಆ ಸಂದರ್ಭದಲ್ಲಿ ದರ್ಶನ್, ಯಶ್ ನನಗೆ ಧೈರ್ಯ ತುಂಬಿದ್ರು ಎಂದು ಹೇಳುತ್ತಾ ಕಳೆದ 5 ವರ್ಷ ಮಂಡ್ಯ ಜನರ ಪ್ರೀತಿಗಳಿಸಿದ್ದೇನೆ. ಮಂಡ್ಯದ ಮಣ್ಣಿನ ತಿಲಕವಿಟ್ಟು ಅಂಬರೀಶ್​ಗೆ ಬೀಳ್ಕೊಟ್ಟೆವು. ಯಾವುದೇ ಕಾರಣಕ್ಕೂ ನಾನು ಕೂಡ ಈ ಮಣ್ಣನ್ನ ಬಿಡೋದಿಲ್ಲ. ನನ್ನ ಹಿಂದೆ ನನ್ನ ಮಕ್ಕಳಿದ್ದಾರೆ. ಈ ಚುನಾವಣೆಯಲ್ಲಿಯೂ ದರ್ಶನ್ ತನ್ನ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎನ್ನುವ ಮೂಲಕವೇ ಸುಳಿವು ಕೊಟ್ಟಿದ್ದಾರೆ.

ಪದೇ ಪದೇ ಮಾತನಾಡುತ್ತ ಇಂದು ಈ ವೇದಿಕೆ ಮುಖಾಂತರ ಮತ್ತೊಮ್ಮೆ ಹೇಳುತ್ತಿದ್ದೇನೆ. ಈ ಮಂಡ್ಯ ನೆಲದ ಗುಣ,ಋಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ, ಅದೇ ರೀತಿ ಈ ಮಣ್ಣನ್ನು ನಾನು ಬಿಡುವುದೂ ಇಲ್ಲ ಎನ್ನುವ ಮೂಲಕ ದಳಪತಿಗಳಿಗೆ ಜೆಡಿಎಸ್-ಬಿಜೆಪಿ ಮೈತ್ರಿ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ಅವರ ಸ್ಪರ್ಧೆ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಪಕ್ಷದಿಂದಲೇ ಸುಮಲತಾ ಅವರು ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಒಂದು ಕಡೆ ಕೇಳಿ ಬರುತ್ತಿದ್ದು, ಕಾಂಗ್ರೆಸ್ ಕೂಡ ಸುಮಲತಾ ಅವರನ್ನು ತಮ್ಮನ್ನ ಸೆಳೆದುಕೊಳ್ಳಲು ನಾನಾ ಸರ್ಕಸ್ ಮಾಡುತ್ತಿದೆ ಎಂಬ ಮಾತು ಕೂಡ ಮತ್ತೊಂದೆಡೆ ಕೇಳಿ ಬಂದಿತ್ತು. ಇದೆಲ್ಲದರ ಜೊತೆಗೆ ಸುಮಲತಾ ಪಕ್ಷೇತರವಾಗಿಯೇ ಸ್ಪರ್ಧೆಗೆ ಇಳಿಯುವುದು ಪಕ್ಕಾ ಎಂಬ ಮಾತು ಕೂಡ ಇದೆ. ಕಳೆದ ಬಾರಿಯ ಚುನಾವಣೆಯ ರೀತಿ ಮಂಡ್ಯದಲ್ಲಿ ಈ ಬಾರಿ ಯಾವ ರೀತಿ ವಾತಾವರಣ ಬೀರುತ್ತೆ ಎಂಬುದು ಮುಂದೆ ಕಾದುನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular