Thursday, April 30, 2026
Flats for sale
Homeಜಿಲ್ಲೆಮಂಗಳೂರು : 61 ವರ್ಷದ ನಿವೃತ್ತ ಬ್ಯಾಂಕ್ ಅಧಿಕಾರಿ ಡಿಜಿಟಲ್ ಅರೆಸ್ಟ್ ಗೆ ಬಲಿ,2.07 ಕೋಟಿ...

ಮಂಗಳೂರು : 61 ವರ್ಷದ ನಿವೃತ್ತ ಬ್ಯಾಂಕ್ ಅಧಿಕಾರಿ ಡಿಜಿಟಲ್ ಅರೆಸ್ಟ್ ಗೆ ಬಲಿ,2.07 ಕೋಟಿ ವಂಚನೆ.

ಮಂಗಳೂರು : ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಭಾರಿ ಸೈಬರ್ ವಂಚನೆ ನಡೆದಿದೆ 61 ವರ್ಷದ ನಿವೃತ್ತ ಬ್ಯಾಂಕ್ ಅಧಿಕಾರಿಯನ್ನು ವಂಚಕರು ಟಾರ್ಗೆಟ್ ಮಾಡಿದ್ದು ಒಟ್ಟು 2.07 ಕೋಟಿ ರೂ. ಲೂಟಿ ಹೊಡೆದಿದ್ದಾರೆ.

ನ್ಯಾಷನಲ್ ಡಾಟಾ ಪ್ರೊಟೆಕ್ಷನ್ ಸೆಂಟರ್ ಅಧಿಕಾರಿ ಎಂದು ಕರೆಮಾಡಿದ್ದು ನಿಮ್ಮ ಮೇಲೆ ಮುಂಬೈನಲ್ಲಿ 30 ರಿಂದ 50 ಎಪ್‌ಐಆರ್ ಆಗಿದೆ ಎಂದು ಬೆದರಿಕೆ ಹಾಕಿದ್ದಾರೆ‌ ಬಳಿಕ NIA ಮತ್ತು ED ಅಧಿಕಾರಿಗಳಂತೆ ನಟಿಸಿ ಸಂಪರ್ಕ ಮಾಡಿದ್ದು ವಾಟ್ಸ್ಆಪ್ ಮೂಲಕ ನಿರಂತರ ಮಾನಸಿಕ ಒತ್ತಡ ನೀಡಿದ್ದಾರೆಂದು ತಿಳಿದುಬಂದಿದೆ.

ಖದೀಮರು ಅಧಿಕಾರಿಯ ಬಯೋಡೇಟಾ ಹಾಗೂ ವೈಯಕ್ತಿಕ ಮಾಹಿತಿ ಪಡೆದಿದ್ದು ಏಪ್ರಿಲ್ 7ರಿಂದ 18ರವರೆಗೆ ಹಂತ ಹಂತವಾಗಿ RTGS ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ.ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular