Saturday, July 25, 2026
Homeಜಿಲ್ಲೆಮಂಗಳೂರು : ಹೆಸರಾಂತ ಬಿಲ್ಡರ್ ನ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ ಓರ್ವ ಸಾವು,ಮತ್ತೋರ್ವನ...

ಮಂಗಳೂರು : ಹೆಸರಾಂತ ಬಿಲ್ಡರ್ ನ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ ಓರ್ವ ಸಾವು,ಮತ್ತೋರ್ವನ ರಕ್ಷಣೆ .!

ಮಂಗಳೂರು : ಮಂಗಳೂರಿನ ಬಲ್ಮಠ ರಸ್ತೆಯಲ್ಲಿರುವ ರೋಹನ್ ಅಸೋಸಿಯೇಟ್ ನ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಅಪಾಯದಲ್ಲಿ ಸಿಲುಕಿದ್ದರು. ಮಧ್ಯಾಹ್ನ ಬಿಹಾರ ಹಾಗೂ ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕರ ಮೇಲೆ ಮಣ್ಣು ಕುಸಿದಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಹಾಗೂ ಎನ್​ಡಿಆರ್​​ಎಫ್ ಸಿಬ್ಬಂದಿ ಸುರಿಯುತ್ತಿರುವ ಮಳೆಯ ನಡುವೆಯೂ ಕಾರ್ಯಾಚರಣೆ ನಡೆಸಿದ್ದರು.

ಮೃತಪಟ್ಟ ಕಾರ್ಮಿಕ ಚಂದನ್ ಕುಮಾರ್

ಕೆಲ ಹೊತ್ತಿನ ಕಾರ್ಯಾಚರಣೆ ಬಳಿಕ ಬಿಹಾರ ಮೂಲದ ಓರ್ವ ಕಾರ್ಮಿಕ ರಾಜ್​ಕುಮಾರ್ ಎಂಬಾತನನ್ನು ಎನ್​ಡಿಆರ್​ಎಫ್ ತಂಡ ರಕ್ಷಿಸಿದೆ. ಫ್ಲೈವುಡ್​ ಮೇಲೆ ಮಣ್ಣು ಕುಸಿದಿದ್ದರಿಂದ ಸ್ವಲ್ಪ ಹೊತ್ತಿನಲ್ಲೇ ಓರ್ವ ಕಾರ್ಮಿಕನನ್ನು ರಕ್ಷಿಸಿ ಸ್ಟ್ರೆಚರ್ ಮೂಲಕ ಮೇಲಕ್ಕೆ ತಂದು ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಬಳಿಕ ಆತ ಚೇತರಿಸಿಕೊಳ್ತಿದ್ದಾನೆ.ಬಳಿಕ ಮತ್ತೋರ್ವ ಕಾರ್ಮಿಕ ಉತ್ತರ ಪ್ರದೇಶ ಮೂಲದ ಚಂದನ್​ ಕುಮಾರ್ ರಕ್ಷಣೆಗೆ NDRF ತಂಡ ಹರಸಾಹಸ ಪಡಬೇಕಾಯಿತು. ಕಾಂಕ್ರಿಟ್ ಗೋಡೆಗೆ ರಂಧ್ರ ತೆಗೆದು ಕಾರ್ಮಿಕನ ಪತ್ತೆ ಹಚ್ಚಿದ ಬಳಿಕ ವೈದ್ಯರ ತಂಡ ಆಕ್ಸಿಜನ್, ಡ್ರಿಪ್ಸ್ ನೀಡಿತು. ಆದ್ರೆ ಕ್ರಮೇಣ ಕಾರ್ಮಿಕನಿಂದ ಸ್ಪಂದನೆ ಕಡಿಮೆಯಾಗುತ್ತಾ ಹೋಗಿದೆ. ಆತನನ್ನ ಹೊರ ತೆಗೆಯಲು ರಕ್ಷಣಾ ತಂಡ ಸುದೀರ್ಘ ಕಾರ್ಯಾಚರಣೆಯನ್ನೇ ನಡೆಸಬೇಕಾಯಿತು. ಇಷ್ಟಾದ್ರೂ ಜೀವಂತವಾಗಿ ಹೊರತೆಗೆಯೋದು ಸಾಧ್ಯವಾಗಲೇ ಇಲ್ಲ.

ಸತತ ಆರೂವರೆ ಗಂಟೆಯಿಂದ ನಡೆದಿದ್ದ ಕಾರ್ಯಾಚರಣೆ ಫಲಿಸದೆ ಮಣ್ಣಿನಡಿ ಸಿಲುಕಿದ ಕಾರ್ಮಿಕ ಸಾವನ್ನಪ್ಪಿದ್ದಾರೆ. ಬಿಹಾರ ಮೂಲದ 30 ವರ್ಷದ ಚಂದನ್ ಸಾವನ್ನಪ್ಪಿದ್ದು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿ ಶಾಮಕ ಸಿಬ್ಬಂದಿ ರಕ್ಷಿಸಲು ತೀವ್ರ ಪ್ರಯತ್ನ ನಡೆಸಿದ್ದರು. ಆದರೆ ಚಂದನ್ ಕುಮಾರ್ ಹೊರತೆಗೆಯಲು ರಾಡ್‌ ಅಡ್ಡಿಯಾಗಿತ್ತು. ರಾಡ್‌ನ ಮಧ್ಯದಲ್ಲಿ ಚಂದನ್‌ ಸಿಲುಕಿದ್ದ. ಕತ್ತಲಾದ ಕಾರಣ ಎಲೋಜಿನ್ ಲೈಟ್ ಹಾಕಿ‌ ಮುಂದುವರೆದಿದ್ದ ಕಾರ್ಯಾಚರಣೆ ನಡೆಸಲಾಗಿತ್ತು. ಸತತ ಆರೂವರೆ ಗಂಟೆಯ ಕಾರ್ಯಾಚರಣೆ ಬಳಿಕ ಸಂಜೆ 7.30ರ ಸುಮಾರಿಗೆ ಚಂದನ್ ಅನ್ನು ಹೊರಕ್ಕೆ ತೆಗೆಯಲಾಗಿದೆ.

ಮೃತ ಕಾರ್ಮಿಕನನ್ನು ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ (30) ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಬಿಲ್ದರ್ ಮಾಫಿಯಾ ಹೆಚ್ಚಾಗುತ್ತಿದ್ದು ಎಲ್ಲ ಕಪ್ಪು ಕುಲಗಳದೇ ಕಾರುಬಾರು ಆದ್ರೆ ಕಳೆದ ಹಲವು ದಿನಗಳಿಂದ ನಿರಂತರ ಮಳೆ ಸುರಿಯುವುದರಿಂದ ಇಂತಹ ಕಾಮಗಾರಿಗಳಿಗೆ ತಡೆನೀಡಬಹುದಿತ್ತು ಆದರೆ ಅದನ್ನು ಮಾಡುವುದಿಲ್ಲ ಯಾಕೆಂದರೆ ಈ ಬಿಲ್ದರ್ ರಾಜ್ಯಸರಕಾರದ ಉನ್ನತ ಮಂತ್ರಿಗಳ ಜೊತೆ ವ್ಯವಹಾರ ಮಾಡುತ್ತಿರುವುದರಿಂದ ಇಂದು ಮಡಿದ ಬಡ ಜೀವಗಳಿಗೆ ಬೆಲೆ ಇಲ್ಲದಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular