ಮಂಗಳೂರು : ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆ ಹಾಗೂ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಬೆಂಬಲ ನೀಡಿರುವ ವಿಚಾರವಾಗಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸ್ಪಷ್ಟನೆ ನೀಡಿದ್ದಾರೆ.
ಕಲ್ಲಡ್ಕ ಪ್ರಭಾಕರ ಭಟ್ ಅವರು ಸನಾತನ ಹಿಂದೂ ಧರ್ಮದ ತಿಜೋರಿಯಿದ್ದಂತೆ ಎಂದು ಬಣ್ಣಿಸಿದ ಮಹೇಶ್ ಶೆಟ್ಟಿ ತಿಮರೋಡಿ, ಈ ಹೋರಾಟದಲ್ಲಿ ನಾವು ಯಾರನ್ನೂ ಉದ್ದೇಶಪೂರ್ವಕವಾಗಿ ಜೋಡಿಸುವುದಿಲ್ಲ. ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಹಾಗೂ ಮಂಜುನಾಥ ಸ್ವಾಮಿಯೇ ಎಲ್ಲರನ್ನೂ ಜೋಡಿಸುತ್ತಾರೆ. ನಾವೆಲ್ಲರೂ ಕೇವಲ ನಿಮಿತ್ತ ಮಾತ್ರ ಎಂದು ಹೇಳಿದ್ದಾರೆ.
ಪುರಾಣಗಳಲ್ಲಿಯೂ ತಾಯಂದಿರ ಮೂಲಕ ಧರ್ಮ ಸ್ಥಾಪನೆಯಾದ ಉದಾಹರಣೆಗಳಿವೆ. ಅದೇ ರೀತಿ ಧರ್ಮಸ್ಥಳದಲ್ಲಿಯೂ ಸೌಜನ್ಯ ಎಂಬ ತಾಯಿಯ ಮೂಲಕ ಧರ್ಮ ಸ್ಥಾಪನೆಯಾಗಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

