Thursday, November 26, 2026
Homeಜಿಲ್ಲೆಮಂಗಳೂರು : ಬ್ರಹ್ಮರಕೂಟ್ಲು ಟೋಲ್‌ಗೆ SDPI ಮುತ್ತಿಗೆ; ಕ್ಯಾಮೆರಾ ಜಖಂ, ಬ್ಯಾರಿಯರ್ ಕಿತ್ತೆಸೆದು ದಾಂಧಲೆ..!

ಮಂಗಳೂರು : ಬ್ರಹ್ಮರಕೂಟ್ಲು ಟೋಲ್‌ಗೆ SDPI ಮುತ್ತಿಗೆ; ಕ್ಯಾಮೆರಾ ಜಖಂ, ಬ್ಯಾರಿಯರ್ ಕಿತ್ತೆಸೆದು ದಾಂಧಲೆ..!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಸಮೀಪದ ಬಿ.ಸಿ.ರೋಡ್‌ನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಟೋಲ್ ಪ್ಲಾಜಾದಲ್ಲಿ SDPI ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗಲಾಟೆ ನಡೆಸಿರುವ ಘಟನೆ ವರದಿಯಾಗಿದೆ.

ಉಪ್ಪಿನಂಗಡಿ ಸಮೀಪ ನೂತನ ಟೋಲ್ ಪ್ಲಾಜಾದಲ್ಲಿ ಇಂದಿನಿಂದ ಟೋಲ್ ವಸೂಲಿ ಆರಂಭವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ SDPI ಕಾರ್ಯಕರ್ತರು, ಬ್ರಹ್ಮರಕೂಟ್ಲು ಟೋಲ್‌ಗೆ ಏಕಾಏಕಿ ಮುತ್ತಿಗೆ ಹಾಕಿದ್ದಾರೆ.

ಈ ವೇಳೆ ಟೋಲ್ ಸಿಬ್ಬಂದಿಗಳಿಗೆ ಧಮಕಿ ಹಾಕಿದ್ದು, ಟೋಲ್‌ನ ಕ್ಯಾಮೆರಾಗಳನ್ನು ಜಖಂಗೊಳಿಸಿ, ಬೂಮ್ ಬ್ಯಾರಿಯರ್‌ಗಳನ್ನು ಕಿತ್ತೆಸೆದಿದ್ದಾರೆ ಎನ್ನಲಾಗಿದೆ. ಅಲ್ಲದೆ, ವಾಹನಗಳಿಂದ ಟೋಲ್ ಶುಲ್ಕ ವಸೂಲಿ ಮಾಡದಂತೆ ತಡೆದು, ವಾಹನಗಳನ್ನು ಉಚಿತವಾಗಿ ಸಂಚರಿಸಲು ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಿಂದ ಟೋಲ್ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮಾಹಿತಿ ತಿಳಿದ ಬಂಟ್ವಾಳ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಉಪ್ಪಿನಂಗಡಿಯಲ್ಲಿ ಹೊಸ ಟೋಲ್ ಆರಂಭವಾದ ಬೆನ್ನಲ್ಲೇ ಬ್ರಹ್ಮರಕೂಟ್ಲು ಟೋಲ್‌ನಲ್ಲಿ ಈ ಘಟನೆ ನಡೆದಿರುವುದು ಗಮನ ಸೆಳೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular