Monday, June 22, 2026
Flats for sale
Homeಜಿಲ್ಲೆಮಂಗಳೂರು ; ಸಮಾಜ ಸೇವಾ ಸಂಘ ದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ : ಆಡಳಿತ...

ಮಂಗಳೂರು ; ಸಮಾಜ ಸೇವಾ ಸಂಘ ದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ : ಆಡಳಿತ ಅಧ್ಯಕ್ಷರ ಬದಲು ಸ್ಪಷ್ಟನೆ ನೀಡಲು ಬಂದ ಸಂಸ್ಥೆಯ ಸಿಬ್ಬಂದಿ,ಪ್ರಶ್ನೆಗೆ ಉತ್ತವಿಲ್ಲದೆ ಕೋಲು ಕೊಟ್ಟು ಪೆಟ್ಟು ತಿಂದ ಬಡಪಾಯಿಗಳು..!

ಮಂಗಳೂರು ; 1981 ರಲ್ಲಿ ಅಮ್ಮೆಂಬಾಳ ಬಾಳಪ್ಪ ಅವರಿಂದ ಆರಂಭಗೊಂಡ ಸಮಾಜ ಸೇವಾ ಸಹಕಾರಿ ಸಂಘ ಇಂದು ವಾರ್ಷಿಕ ಕೋಟ್ಯಾಂತರ ರೂಪಾಯಿ ಲಾಭದಲ್ಲಿ ನಡಿತಾ ಇದೆ. ಆದ್ರೆ ಈಗ ಇದೇ ಸಹಕಾರಿ ಸಂಘದಲ್ಲಿ ಇದೀಗ ಕೋಟ್ಯಾಂತರ ರೂಪಾಯಿಯ ಅವ್ಯವಹಾರ ನಡೆದ ಬಗ್ಗೆ ಎಫ್ಐಆರ್ ದಾಖಲಾಗಿದೆ. ನಕಲಿ ಚಿನ್ನವನ್ನು ಅಡವಿಟ್ಟು ಬ್ಯಾಂಕ್ ಗೆ ವಂಚಿಸಿದ ಆರೋಪದಲ್ಲಿ ಬ್ಯಾಂಕ್ ಸಿಬ್ಬಂದಿ ಹಾಗೂ ನಿರ್ದೇಶಕರು ಸೇರಿದಂತೆ 28 ಜನರ ವಿರುದ್ಧ ದೂರು ನೀಡಲಾಗಿದೆ.

ನಕಲಿ ಚಿನ್ನದ ಬಳೆ ಇಟ್ಟು 2 ಕೋಟಿಗೂ ಅಧಿಕ ಸಾಲ ನೀಡಿದ್ದು ಚಿನ್ನ ಅಸಲಿ ಎಂದು ಸಾಬೀತು ಮಾಡಿದ್ದ ಬ್ಯಾಂಕ್ ಸರಫ ಪ್ರಕರಣ ಮುಚ್ಚಿ ಹಾಕಲು ಮತ್ತೊಂದು ಗೋಲ್ಮಾಲ್ ನಡೆಯುತ್ತಿದೆ ಎಂಬ ಮಾಹಿತಿ ದೊರೆತಿದೆ. ಇದೀಗ ಪ್ರಕರಣದ ತನಿಖೆ ಮುಚ್ಚಿ ಹಾಕಲು ಹೊಸ ಅಬ್ಬೇಪಾರಿ ಉಪಾಯಗಳನ್ನು ಹಿಡಿದು ಪತ್ರಿಕಾಗೋಷ್ಠಿಯನ್ನು ಮಾಡಿದ್ದು ಅಬೂಬಕರ್ ಸಿದ್ದೀಕ್ ಎಂಬಾತ ಈ ಬ್ಯಾಂಕ್ನಲ್ಲಿ ಒಂದೇ ತರನಾದ 500 ಚಿನ್ನದ ಬಳೆಗಳನ್ನು ಇಟ್ಟು 2 ಕೋಟಿ 11 ಲಕ್ಷದ 80 ಸಾವಿರ ಸಾಲ ಪಡೆದಿದ್ದವನನ್ನು ಬಂದಿಸದೆ ತನ್ನ ಸಂಘದಲ್ಲಿರುವ ಹೂಡಿಕೆದಾರರ ಮನಹೋಲಿಸಲು ತಾವೇ ತಮ್ಮ ಸಿಬಿಬಂದಿಗಳು ಸೇರಿ ಹಣ ಪಾವತಿ ಮಾಡಿ ಅಬೂಬಕರ್ ಸಿದ್ದೀಕ್ ನ ಗೋಲ್ಮಾಲ್ ಸಾಲವನ್ನು ತೀರಿಸಿ ಸಾಲ ಮನ್ನಾ ಮಾಡಿದ್ದಾರೆಂದು ಸಹಕಾರಿ ಸಂಘದ ಚುನಾವಣೆಯ ಹಿನ್ನೆಲೆ ಪ್ರಸ್ತುತವಿರುವ ಅಧ್ಯಕ್ಷರು ಆಡಳಿತ ಮಂಡಳಿ ಸ್ಪಷ್ಟನೆ ನೀಡಲು ಬಂದಿರಲಿಲ್ಲವೆಂದು ಮಾಹಿತಿ ನೀಡಿದ್ದಾರೆ.

ಇದೀಗ ಹೂಡಿಕೆದಾರರ ಮನಹೋಲಿಸಲು ಇನ್ನಿತರ ಕಸರತ್ತು ನಡೆಸುತ್ತಿದ್ದು ಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ದಂಗಾಗಿ ಉತ್ತರನೀಡದೆ ಅಂಗಲಾಚಿದ್ದಾರೆಂದು ತಿಳಿದುಬಂದಿದೆ. ದಯವಿಟ್ಟು ಈ ಮಾಹಿತಿಯನ್ನು ಪ್ರಸಾರಮಾಡಿ ನಮ್ಮ ಗ್ರಾಹಕರಿಗೆ ನಾವು ಹೇಳುವ ಮಾಹಿತಿ ನೀಡಿ ಸಹಕಾರಿ ಸಂಘ ಉತ್ತಮ ಲಾಭದಲ್ಲಿದೆ ಹಾಗೂ ಯಾವುದೇ ನಷ್ಟವಿಲ್ಲ ಬಾಕಿಯಿರುವ ನಷ್ಟವನ್ನೆಲ್ಲಾ ಸಿಬ್ಬಂದಿ ವರ್ಗ ಹೊಂದಿಸಿದ್ದಾರೆಂದು ಬೇಡಿಕೊಂಡಿದ್ದಾರೆ. ಸಂಸ್ಥೆಯಲ್ಲಿ ನಡೆದ ಅವ್ಯವಹಾರ ವನ್ನು ಒಪ್ಪಿಕೊಂಡಿದ್ದು ಸಂಸ್ಥೆಯು ಮುಂದುವರಿಯಲು ಗ್ರಾಹಕರು ಬೆನ್ನೆಲುಬು ಅದರಿಂದ ಸಿಬ್ಬಂದಿಗಳ ಜೀವನ ನಿರ್ವಹಣೆಗೆ ಸಂಸ್ಥೆ ಪ್ರಮುಖ ಪಾತ್ರವಹಿಸಿದ್ದು ಇದರಿಂದಾಗಿ ಸಿಬ್ಬಂದಿಗಳು ಪತ್ರಿಕಾಗೋಷ್ಠಿಯಲ್ಲಿ ಅಂಗಲಾಚಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular