Tuesday, July 21, 2026
Homeಜಿಲ್ಲೆಮಂಗಳೂರು : ಫುಡ್ ಪಾಯ್ಸನ್ ನಿಂದ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನಲ್ವತ್ತಕ್ಕೂ ಅಧಿಕ ಕೈದಿಗಳು...

ಮಂಗಳೂರು : ಫುಡ್ ಪಾಯ್ಸನ್ ನಿಂದ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನಲ್ವತ್ತಕ್ಕೂ ಅಧಿಕ ಕೈದಿಗಳು ಅಸ್ವಸ್ಥ,ಇಬ್ಬರು ಗಂಭೀರ…!

ಮಂಗಳೂರು : ಕಾರಾಗೃಹದಲ್ಲಿ ಆಹಾರದ ಸಮಸ್ಯೆವಿದ್ದು ಸರಿಯಾಗಿ ನಿಭಾಯಿಸದಿರುವುದೇ ಮುಖ್ಯ ಕಾರಣವೆಂದು ಮಾಹಿತಿ ದೊರೆತಿದೆ. ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿನ ಸುಮಾರು ನಲ್ವತ್ತಕ್ಕೂ ಅಧಿಕ ಕೈದಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮಧ್ಯಾಹ್ನ ಆಹಾರ ಸೇವಿಸಿದ ಕೆಲ ಸಮಯದ ಬಳಿಕ ಕೈದಿಗಳು ವಾಂತಿ ಮಾಡಲು ಆರಂಭಿಸಿದ್ದಾರೆ. ಇನ್ನೂ ಕೆಲವರಿಗೆ ವಾಂತಿಭೇದಿ ಎರಡೂ ಕೂಡಾ ಕಾಣಸಿಕೊಂಡು ತಲೆ ಸುತ್ತಿ ಬಿದ್ದಿದ್ದಾರೆ.

ಕೈದಿಗಳ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ತಕ್ಷಣ ಜೈಲಿನ ಅಧಿಕಾರಿಗಳು ಭದ್ರತೆಯೊಂದಿಗೆ ಅನಾರೋಗ್ಯಕ್ಕೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ ವೆನ್ಲಾಕ್‌ ಗೆ ಹಲವರು ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫುಡ್ ಪಾಯ್ಸನ್ ಆಗಲು ನಿಖರ ಕಾರಣ ಇನ್ನೂ ಗೊತ್ತಾಗಿಲ್ಲವಾಗಿದ್ದು, ನೀರು ಅಥವಾ ಸೇವಿಸಿದ ಆಹಾರದಲ್ಲಿ ವಿಷ ಪದಾರ್ಥ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ಕೆಲ ಕೈದಿಗಳು ತೀವ್ರ ಅಸ್ವಸ್ಥರಾಗಿದ್ದು, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular