ಮಂಗಳೂರು : ಮಂಗಳೂರಿನಲ್ಲಿ ಮುಸ್ಲಿಂ ಖಬರಿಸ್ತಾನ್ ವಿವಾದ ಭುಗಿಲೆದ್ದಿದೆ ಟಿಪ್ಪು ಸುಲ್ತಾನ್ ಕಾಲದ ಖಬರಿಸ್ತಾನ ಗುಳುಂ ಮಾಡಿದ ಗಂಭೀರ ಆರೋಪ ಕೇಳಿಬಂದಿದೆ.
ರಾತ್ರೋರಾತ್ರಿ ಮಾಯವಾಯ್ತಂತೆ ನೂರಾರು ವರ್ಷಗಳ ಹಳೆಯ ಖಬರಿಸ್ತಾನ ?
ಮಂಗಳೂರಿನ ಬಿಕರ್ನಕಟ್ಟೆಯ ಅಹ್ಸನುಲ್ ಮಸೀದಿಯಲ್ಲಿಈ ವಿವಾದ ಭುಗಿಲೆದ್ದಿದ್ದು ಖಬರಿಸ್ತಾನದ ವಿವಾದೀತ ಜಾಗದಲ್ಲಿ ಭಾರೀ ಸಂಘರ್ಷ ನಡೆದಿದೆ. ಮಸೀದಿಯ ಖಬರಿಸ್ತಾನದ ಭೂಮಿ ಕಬಳಿಸಿದ ಆರೋಪ ಹಿನ್ನೆಲೆ ಮಸೀದಿ ಆಡಳಿತದಿಂದ ಪ್ರತಿಭಟನೆ ನಡೆಸಿದ್ದು ಪ್ರತಿಭಟನೆ ವೇಳೆ ಜಾಗ ಕಬಳಿಸಿದ ಆರೋಪ ಹೊತ್ತ ಕುಟುಂಬದ ಮಹಿಳೆಯಿಂದ ರಂಪಾಟ ನಡೆದಿದೆ. ಪ್ರತಿಭಟಿಸುತ್ತಿದ್ದವರ ಮೇಲೆ ದೊಣ್ಣೆಯಿಂದ ದಾಳಿ ನಡೆಸಿದ್ದು ಬ್ಯಾನರ್ ಕಿತ್ತೆಸೆದು ಮಹಿಳೆ ಆಕ್ರೋಶ ಹೊರಹಾಕಿದ್ದಾರೆ.
ಉಸ್ಮಾನ್ ಎಂಬವವರಿಂದ ಪ್ರತಿಭಟನಕಾರನ ಶರ್ಟ್ ಹರಿದು ಹಾಕಿದ್ದು ಹಲವು ವರ್ಷಗಳಿಂದ ಮಸೀದಿ ಪಕ್ಕದ 30 ಸೆಂಟ್ಸ್ ಜಾಗ ಖಬರಿಸ್ತಾನ ಆಗಿತ್ತು ಎಂದು ಮಸೀದಿ ಆಡಳಿತ ತಿಳಿಸಿದೆ. ನೂರಾರು ವರ್ಷಗಳಿಂದ ಪೂರ್ವಜರ ಮೃತದೇಹ ದಫನ ಮಾಡಿದ್ದಾಗಿ ಆಡಳಿತ ಮಂಡಳಿ ಹೇಳಿಕೆ ನೀಡಿದ್ದು ನೂರಾರು ಮುಸ್ಲಿಂ ಕುಟುಂಬಗಳ ಶವ ಧಪನ ಮಾಡಿರುವ ಬಗ್ಗೆ ಉಲ್ಲೇಖಿಸಿದೆ ಅದರೆ ಅದು ದಫನ ಭೂಮಿ ಅಲ್ಲ, ನಮ್ಮ ಖಾಸಗಿ ಜಾಗ ಎಂದು ಉಸ್ಮಾನ್ ಕುಟುಂಬ ಹೇಳಿದೆ.
30 ಸೆಂಟ್ಸ್ ಜಾಗ ತಮ್ಮ ಹೆಸರಿನಲ್ಲೇ ಇರೋದಾಗಿ ಉಸ್ಮಾನ್ ಕುಟುಂಬದ ಹೇಳಿಕೆ ನೀಡಿದೆ ಆದರೆ ಜಾಗ ತಮ್ಮದು ಎನ್ನುತ್ತಿರುವ ಮಸೀದಿ ಆಡಳಿತ ಮಂಡಳಿ ಹೇಳಿದೆ ಸದ್ಯ ಎರಡು ಬಣದ ಸಂಘರ್ಷಕ್ಕೆ ಮಸೀದಿ ಖಬರಿಸ್ತಾನ ಭೂ ವಿವಾದ ವೇದಿಕೆಯಾಗಿದ್ದು ಮುಸ್ಲಿಂ ಕುಟುಂಬ ಹಾಗೂ ಮಸೀದಿ ಆಡಳಿತದ ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿದೆ. ಇದೀಗ ಖಬರಿಸ್ತಾನಕ್ಕೆ ಮಣ್ಣು ಹಾಕಿ ಜಾಗ ಗುಳುಂ ಮಾಡಿರೋ ಆರೋಪ ಕೂಡ ಕೇಳಿಬಂದಿದೆ.


