Friday, July 24, 2026
Homeಕ್ರೈಂಮಂಗಳೂರು : ನೇತ್ರಾವತಿ ಸೇತುವೆ ಮೇಲೆ ಬೈಕ್ ಡಿವೈಡರ್‌ಗೆ ಡಿಕ್ಕಿ ಸವಾರ ಸಾವು.

ಮಂಗಳೂರು : ನೇತ್ರಾವತಿ ಸೇತುವೆ ಮೇಲೆ ಬೈಕ್ ಡಿವೈಡರ್‌ಗೆ ಡಿಕ್ಕಿ ಸವಾರ ಸಾವು.

ಮಂಗಳೂರು : ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟ ಘಟನೆ ಉಳ್ಳಾಲದ ನೇತ್ರಾವತಿ ಸೇತುವೆ ಬಳಿ ಮಂಗಳವಾರ ತಡರಾತ್ರಿ ಜ.23ರಂದು ನಡೆದಿದೆ.

ಮೃತರನ್ನು ಸುರೇಶ್ (30) ಎಂದು ಗುರುತಿಸಲಾಗಿದ್ದು, ಬಾಗಲಕೋಟೆ ನಿವಾಸಿಯಾಗಿದ್ದು, ಕುಟುಂಬ ಸಮೇತ ಸಲಫಿ ಮಸೀದಿ ಎದುರಿನ ಕಲ್ಲಾಪು ಎಂಬಲ್ಲಿ ವಾಸವಾಗಿದ್ದರು. ಈ ಹಿಂದೆ ಮಂಗಳೂರಿನ ರಾಯಲ್ ಎನ್‌ಫೀಲ್ಡ್ ಶೋರೂಂನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಅವರು ನಂತರ ಸ್ವಂತ ವರ್ಕ್‌ಶಾಪ್ ತೆರೆದಿದ್ದರು. ತನ್ನ ವರ್ಕ್‌ಶಾಪ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಸುರೇಶ ಈ ದುರ್ಘಟನೆ ನಡೆದಿದೆ.

ಸುರೇಶ್ ಅವರ ತಲೆಗೆ ತೀವ್ರ ಏಟುಬಿದ್ದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ .ಸುರೇಶ್ ಅವರು ತಂದೆ-ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular